ಕೆಐಒಸಿಎಲ್‌ನಿಂದ ಇರಾನ್‌ಗೆ ಕಬ್ಬಿಣದ ಅದಿರು ರಫ್ತು

Update: 2016-01-02 18:42 GMT

ಮಂಗಳೂರು, ಜ.2: ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯು (ಕೆಐಒಸಿ ಎಲ್) ಇರಾನ್‌ಗೆ ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರಿನ ಉಂಡೆಗಳನ್ನು ರಫ್ತು ಮಾಡುವ ವಹಿವಾಟನ್ನು ಆರಂಭಿಸಿದ್ದು, ಇಂದು ಪ್ರಥಮ ಸಾಗಾಟಕ್ಕೆ ಕಂಪೆನಿಯ ವ್ಯವ ಸ್ಥಾಪಕ ನಿರ್ದೇಶಕ ಮಲಯ್ ಚಟರ್ಜಿ ಹಸಿರು ನಿಶಾನೆ ತೋರಿದರು.
ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಮಲಯ್ ಚಟರ್ಜಿ, ಹಡಗಿನ ಮೂಲಕ ಪ್ರಥಮ ಸಾಗಾಟದಲ್ಲಿ 66,500 ಟನ್ ರಫ್ತು ಮಾಡಲಾಗುತ್ತಿದೆ. ಸೋಮವಾರ ಈ ಹಡಗು ನವಮಂಗಳೂರು ಬಂದರಿನಿಂದ ನಿರ್ಗಮಿಸಿ 5 ದಿನಗಳ ಪ್ರಯಾಣದ ಬಳಿಕ ಇರಾನ್ ತಲುಪುವ ಸಾಧ್ಯತೆ ಇದೆ ಎಂದರು. ಇರಾನ್ ಎಫ್‌ಇ ಪ್ರಮಾಣ ಶೇ.67ರಷ್ಟಿ ರುವ ಅದಿರಿನ ಉಂಡೆಗಳನ್ನು ಪೂರೈಸುವಂತೆ ಕೋರಿತ್ತು. ಆದರೆ ಈ ಗುಣಮಟ್ಟದ ಅದಿರು ಭಾರತದಲ್ಲಿ ಲಭ್ಯವಿಲ್ಲ. ಬ್ರೆಝಿಲ್ನಿಂದ ಅದಿರನ್ನು ಆಮದು ಮಾಡಿಕೊಂಡು ಮಂಗಳೂರಿನಲ್ಲಿರುವ ಉಂಡೆ ತಯಾರಿಕಾ ಘಟಕದಲ್ಲಿ ಸಂಸ್ಕರಣೆ ಮಾಡಲಾಗಿದೆ. ಐದು ಲಕ್ಷ ಟನ್ ಉಂಡೆಗಳನ್ನು ಇರಾನ್‌ಗೆ ರಫ್ತು ಮಾಡುವ ಗುರಿ ಇದೆ. ಇರಾನ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಉಕ್ಕು ತಯಾರಿಕಾ ಕಂಪೆನಿಗಳ ಬೇಡಿಕೆ ಪೂರೈಸುವುದಕ್ಕಾಗಿಯೇ ಮಂಗಳೂರಿನ ಕೆಐಒಸಿಎಲ್ ಅದಿರಿನ ಉಂಡೆ ತಯಾರಿಕಾ ಘಟಕ ಸ್ಥಾಪಿಸಲಾಗಿತ್ತು. ಇರಾನ್‌ವೊಂದರಲ್ಲೇ 10 ಲಕ್ಷ ಟನ್ ಅದಿರಿನ ಉಂಡೆಗಳಿಗೆ ಬೇಡಿಕೆಯಿದೆ ಎಂದು ಹೇಳಿದರು. 
ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊ ಳಿಸಿದ ಬಳಿಕ ಕೆಐಒಸಿಎಲ್ ಸಂಕಷ್ಟದಲ್ಲಿದೆ. ಈಗ ಬಳ್ಳಾರಿಯಲ್ಲಿ 500 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆಯೊಂದನ್ನು ಕೆಐಒಸಿಎಲ್ಗೆ ಮಂಜೂರು ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದರು. ನವ ಮಂಗಳೂರು ಬಂದರು ಮಂಡ ಳಿಯ ಅಧ್ಯಕ್ಷ ಪಿ.ಸಿ.ಫರೀದ, ಕೆಐಒಸಿಎಲ್ನ ವಾಣಿಜ್ಯ ವಿಭಾಗದ ನಿರ್ದೇಶಕ ಸುಬ್ಬರಾವ್, ಅದಿರು ರಫ್ತು ಗುತ್ತಿಗೆದಾರ ಕಂಪೆನಿಯಾದ ದಿಲ್ಲಿಯ ಟಫ್ ಮೆಟಲ ರ್ಜಿಕಲ್ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಮಲ್ಹೋತ್ರಾ, ಬಿಜೆಪಿ ಮುಖಂಡ ಬಿ. ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News