ಕಾರ್ಪೊರೇಶನ್ ಬ್ಯಾಂಕ್‌ಗೆ ‘ಎನ್‌ಪಿಸಿಐ-2015’ ಮೂರು ಪ್ರಶಸ್ತಿ
Update: 2016-01-03 00:21 IST
ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆ್ ಇಂಡಿಯಾ ನೀಡುವ ನ್ಯಾಶನಲ್ ಪೇಮೆಂಟ್ಸ್ ಎಕ್ಸಲೆನ್ಸ್ ಅವಾರ್ಡ್ 2015 ಮೂರು ಪ್ರಶಸ್ತಿಗಳಿಗೆ ಕಾರ್ಪೊರೇಶನ್ ಬ್ಯಾಂಕ್ ಪಾತ್ರವಾಗಿದೆ. ಚೆಕ್ ವ್ಯವಹಾರ ಸೇವಾ ಸೌಲಭ್ಯಕ್ಕೆ ಸಂಬಂಸಿ ಕಾರ್ಪ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್‌ಗೆ ಜಂಟಿಯಾಗಿ ಪ್ರಥಮ, ಐಎಂಪಿಎಸ್‌ಗೆ ಸಂಬಂಸಿ ಎನ್‌ಎ್ಎಸ್ ಎರಡು ದ್ವಿತೀಯ ಪ್ರಶಸ್ತಿಯನ್ನು ಗಳಿಸಿದೆ. ಇತ್ತೀಚೆಗೆ ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಆರ್‌ಬಿಐ ಡೆಪ್ಯುಟಿ ಗವರ್ನರ್ ಆರ್.ಗಾಂಯವರು ಕಾರ್ಪ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಕುರಿಯನ್ ಪಿ.ಅಬ್ರಹಾಂರವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಐಡಿಬಿಆರ್‌ಟಿ ನಿರ್ದೇಶಕ ಡಾ.ಎ.ಎಸ್.ರಾಮಶಾಸಿ, ಐಬಿಎ ಮುಖ್ಯ ಕಾರ್ಯನಿರ್ವಾಹಕ ಎಂ.ವಿ.ಟಂಕಸಾಲೆ, ಎನ್‌ಪಿಸಿಎ ಅಧ್ಯಕ್ಷ ಬಾಲಚಂದ್ರನ್, ಸಿಇಒ ಎ.ಪಿ.ಹೋಟ ಉಪಸ್ಥಿತರಿದ್ದರು.