×
Ad

ಇಂದಿನ ಕಾರ್ಯಕ್ರಮ

Update: 2016-01-03 00:22 IST

ಜಿಲ್ಲಾ ನಾಟಕೋತ್ಸವ:ಉಡುಪಿ ಜಿಲ್ಲಾ ನಾಟಕೋತ್ಸವದ ಉದ್ಘಾಟನೆ ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯರಿಂದ. ಗೀತಂ ಗಿರೀಶ್ ಉಡುಪಿ ಮತ್ತು ಬಳಗದಿಂದ ರಂಗಗೀತೆಗಳು ಬಳಿಕ ನಿಟ್ಟೂರು ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಮಂಜುನಾಥ ಬೆಳೆಕೆರೆ ಇವರ ‘ಕುಹೂ ಕುಹೂ ಕೋಗಿಲೆ’ ನಾಟಕ ಪ್ರದರ್ಶನ. ಸಮಯ: ಸಂಜೆ 5:15ರಿಂದ. ಸ್ಥಳ: ಎಂಜಿಎಂ ಕಾಲೇಜಿನ ಮುದ್ದಣ ಮಂಟಪ, ಉಡುಪಿ. ಅರಣ್ಯಾಕಾರಿಗಳ ಸಂಘದ ಸಭೆ:

ಉಡುಪಿ ಜಿಲ್ಲೆ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಕಾರಿಗಳ ಸಂಘದ 16ನೆ ವಾರ್ಷಿಕೋತ್ಸವ. ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ, ನಿವೃತ್ತ ಅರಣ್ಯಾಕಾರಿಗಳಿಗೆ ಸನ್ಮಾನ. ಸಮಯ: ಬೆಳಗ್ಗೆ 9:30ಕ್ಕೆ. ಸ್ಥಳ: ಹೊಟೇಲ್ ಕಿದಿಯೂರಿನ ಪವನ್ ರೂಪ್ ಟಾಪ್ ಸಭಾಂಗಣ, ಉಡುಪಿ. ಪ್ರವಚನ: ಮಣಿಪಾಲದ ಬ್ರಹ್ಮಕುಮಾರೀಸ್ ವತಿಯಿಂದ ರಾಜಯೋಗಿನಿ ರಾಜಸ್ತಾನ ವೌಂಟ್ ಅಬುವಿನ ಬಿ.ಕೆ.ಉಷಾರಿಂದ ಮನೋಚೈತನ್ಯ ಹೆಚ್ಚಿಸುವ ಪ್ರೇರಣಾತ್ಮಕ ಪ್ರವಚನ. ಸಮಯ: ಸಂಜೆ 6ಕ್ಕೆ. ಸ್ಥಳ: ಸಿಂಡಿಕೇಟ್ ಬ್ಯಾಂಕ್‌ನ ಗೋಲ್ಡನ್ ಜ್ಯುಬಿಲಿ ಹಾಲ್ ಮಣಿಪಾಲ.

ಸಂಸ್ಕೃತಿ-ಸಂಭ್ರಮ:

ಸಮೂಹ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಹಕಾರದೊಂದಿಗೆ ಗಮಕ-ಚಿಂತನ-ಕಥನ-ನರ್ತನ-ಯಕ್ಷ- ಅಭಿನಯ-ರಂಗಗಾಯನ ‘ಕರ್ಣ’. ಸಮಯ: ಬೆಳಗ್ಗೆ 9ರಿಂದ ಮಧ್ಯಾಹ್ನ 1:30ರವರೆಗೆ. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ, ಉಡುಪಿ. ಕೃಷ್ಣ ಮಠ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 7:30ಕ್ಕೆ ರಾಜಾಂಗಣದಲ್ಲಿ ಆನಂದತೀರ್ಥಾಚಾರ್ಯ ಮಠದರಿಂದ ಸುಮಧ್ವವಿಜಯ ಮಂಗಳ. ಸಂಜೆ 5ಕ್ಕೆ ಚಂದ್ರ ಶಾಲೆ ಪುರಾಣ ವಿದ್ವಾನ್ ಮಧ್ವೇಶ ಆಚಾರ್ಯರಿಂದ ಪ್ರವಚನ. 5:30ಕ್ಕೆ ಮಧ್ವಮಂಟಪದಲ್ಲಿ ಉಮೇಶ ಇಡ್ಯಾರಿಂದ ಸ್ಯಾಕೋ್ಸೆೆನ್ ವಾದನ, 6ಕ್ಕೆ ರಾಜಾಂಗಣದಲ್ಲಿ ಅದಮಾರು ಮಠಾೀಶ ಶ್ರೀವಿಶ್ವಪ್ರಿಯ ತೀರ್ಥರಿಂದ ರಾಜಸೂಯದ ಕುರಿತು ಪ್ರವಚನ. 7:30ರಿಂದ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ಬಳಗದಿಂದ ನೃತ್ಯ ಸಂಗಮ ಹಾಗೂ ನೃತ್ಯರೂಪಕ ‘ಸತ್ಯಮೇವ ಜಯತೇ’. 7:15ಕ್ಕೆ ಸುವರ್ಣ ರಥೋತ್ಸವ.

ಹಿಂದೂ ಸಮಾಜೋತ್ಸವ: ವಿಶ್ವ ಹಿಂದು ಪರಿಷತ್, ಬಜರಂಗದಳ ಹಿರಿಯಡಕ ವತಿಯಿಂದ ಹಿಂದೂ ಸಮಾಜೋತ್ಸವ. ಸಮಯ: ಸಂಜೆ 4ಕ್ಕೆ. ಸ್ಥಳ: ಹಿರಿಯಡ್ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News