ನಾಳೆಯಿಂದ ರಾಜ್ಯಮಟ್ಟದ ಈಜು ಚಾಂಪಿಯನ್‌ಶಿಪ್

Update: 2016-01-02 19:11 GMT

ಉಡುಪಿ, ಜ.2: ಕರ್ನಾಟಕ ಈಜು ಸಂಸ್ಥೆ ಹಾಗೂ ಉಡುಪಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜಂಟಿ ಆಶ್ರಯದಲ್ಲಿ 16ನೆ ರಾಜ್ಯ ಶಾರ್ಟ್‌ಕೋರ್ಸ್(25 ಮೀ. ಉದ್ದದ ಈಜುಕೊಳ) ಈಜು ಸ್ಪರ್ಧೆಯನ್ನು ಜ.4, 5 ಮತ್ತು 6ರಂದು ಅಜ್ಜರಕಾಡು ಈಜುಕೊಳದಲ್ಲಿ ಹಮ್ಮಿಕೊಳ್ಳಲಾಗಿದೆ.

15-18 ವರ್ಷ, 13-14 ವರ್ಷ, 11-12 ವರ್ಷ, 9-10 ವರ್ಷ ವಯೋಮಿತಿಯ 4 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಸಂಸ್ಥೆಯ ಪ್ರ. ಕಾರ್ಯದರ್ಶಿ ಎಸ್.ಆರ್.ಶಿಂದಿಯಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಒಲಿಂಪಿಕ್ ಟಚ್ ಪ್ಯಾಡ್ ಟೈಮಿಂಗ್ ಸಿಸ್ಟಮ್‌ನ್ನು ಬಳಸ ಲಾಗುವುದು. ಪ್ರತಿ ವಿಭಾಗದಲ್ಲಿ ವಿಜೇತರಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ನೀಡಲಾಗುವುದು. ಅತಿಹೆಚ್ಚು ಅಂಕ ಗಳಿಸುವ ಕ್ಲಬ್‌ಗೆ ಸಮಗ್ರ ಪ್ರಶಸ್ತಿ ಮತ್ತು ರನ್ನರ್ ಅಪ್ ನೀಡಲಾಗುವುದು. ಪ್ರಥಮ ಹಾಗೂ ದ್ವಿತೀಯ ಪದಕ ವಿಜೇತರು ಜ.22ರಿಂದ 24ರವರೆಗೆ ಕೇರಳದ ತಿರುವನಂತಪುರಂನಲ್ಲಿ ನಡೆಯಲಿರುವ ದಕ್ಷಿಣ ವಲಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅವಕಾಶ ಪಡೆಯಲಿದ್ದಾರೆ ಎಂದರು.

ಜ.4ರಂದು ಬೆಳಗ್ಗೆ 10ಕ್ಕೆ ಚಾಂಪಿಯನ್‌ಶಿಪ್‌ನ್ನು ಉಡುಪಿ ಎಸ್ಪಿ ಅಣ್ಣಾಮಲೈ ಉದ್ಘಾಟಿಸಲಿದ್ದು, ಜಿಲ್ಲಾಕಾರಿ ಡಾ.ಆರ್.ವಿಶಾಲ್ ಅಧ್ಯಕ್ಷತೆ ವಹಿಸಲಿರುವರು ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯ ರಮಾಕಾಂತ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News