ನಾಳೆಯಿಂದ ಇಂದ್ರಧನುಷ್
Update: 2016-01-03 00:28 IST
ಉಡುಪಿ, ಜ.2: ರೋಟರಿ ಕ್ಲಬ್‌ನ ಸಹಯೋಗದಿಂದ ಜ.4ರಿಂದ 12ರವರೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಡೆಯಲಿರುವ ಇಂದ್ರಧನುಷ್ ಕಾರ್ಯಕ್ರಮದ 4ನೆ ಸುತ್ತನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಬೆಳಗ್ಗೆ 9ಕ್ಕೆ ಕುಕ್ಕಿಕಟ್ಟೆಯ ನಗರ ಕುಟುಂಬ ಕಲ್ಯಾಣ ಕೇಂದ್ರದಲ್ಲಿ ಉದ್ಘಾಟಿಸಲಿದ್ದಾರೆ. ಜಿಲ್ಲೆಯಲ್ಲಿ ಜ.4ರಿಂದ 12ರವರೆಗೆ ಗುರುವಾರ ಹೊರತುಪಡಿಸಿ ಲಸಿಕೆ ವಂಚಿತ, ಲಸಿಕೆ ಪ್ರಾರಂಭಿಸದ, ಲಸಿಕೆ ಪಡೆಯಲು ಅರ್ಹ 0-2 ವರ್ಷದ ಮಕ್ಕಳು ಹಾಗೂ ಟಿ.ಟಿ. ಚುಚ್ಚುಮದ್ದು ಪಡೆಯಲು ಅರ್ಹ ಗರ್ಭಿಣಿಯರಿಗೆ ಲಸಿಕೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.