×
Ad

ಲಯನ್ ಜಿಲ್ಲಾ ಸಮ್ಮೇಳನ

Update: 2016-01-03 10:32 IST

ಮಂಗಳೂರು: 317-ಡಿ ಲಯನ್ ಜಿಲ್ಲೆ ಇದರ ಪ್ರಾಂತ್ಯ ಪ್ರಾಂತೀಯ ಸಮ್ಮೇಳನವು ಪ್ರಾಂತ್ಯಾಧ್ಯಕ್ಷ ಲ ಶ್ರೀನಾಥ್ ಕೊಂಡೆ ಇವರ ಅಧ್ಯಕ್ಷತೆಯಲ್ಲಿ ನಗರದ ಲಯೋಲ ಹಾಲ್‌ನಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಅಬುಧಾಬಿ ಯು.ಎ. ಎಕ್ಸೆಜ್ ಇದರ ಅಧ್ಯಕ್ಷರಾದ ಶ್ರೀ ವೈ. ಸುಧೀರ್ ಕುಮಾರ್ ಶೆಟ್ಟಿಯವರು ಹಾಗೂ ಜನಪದ ವಿಶ್ವವಿದ್ಯಾಲಯ ಇದರ ಉಪಕುಲಪತಿ ಶ್ರೀಯುತ ಡಾ ಕೆ.ಚಿನ್ನಪ್ಪ ಗೌಡರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಪ್ರಾಂತ್ಯ ಇದರ ಪ್ರಥಮ ಮಹಿಳೆ ಶ್ರೀಮತಿ ಮೈನಾ ಶ್ರೀನಾಥ್ ಕೊಂಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಅಲ್ಲದೆ ಸಮ್ಮೇಳನದಲ್ಲಿ ಮಂಗಳೂರಿನ ಖ್ಯಾತ ಶ್ರೀ ದೇವಿ ಎಜುಕೇಶನ್‌ನ ಕಾರ್ಯದರ್ಶಿ ಶ್ರೀಮತಿ ಮೈನಾ.ಎಸ್. ಶೆಟ್ಟಿ, ಸಮಾಜ ಸೇವಕ, ಶಿಕ್ಷಣ ಸಂಸ್ಥೆಗಳ ಸ್ಥಾಪಕ ಶ್ರೀಯುತ ನವೀನ್ ಚಂದ್ರ ಡಿ. ಸುವರ್ಣ ಹಾಗೂ ರಾಷ್ಟ್ರಪತಿ ಪದಕ ವಿಜೇತ ಸೂಪರಿಡೆಂಟ್ ಆಫ್ ಪೋಲಿಸ್ ಜಯಂತ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷ ದೇವದಾಸ್ ಭಂಡಾರಿ, ಲಯನ್ ಜಿಲ್ಲಾ ಪ್ರಥಮ ವಿ.ಡಿ.ಜಿ ಅರುಣ್ ಕುಮಾರ್ ಶೆಟ್ಟಿ ವಲಯಾಧ್ಯಕ್ಷರುಗಳಾದ ಶಶಿಧರ್ ಮಾರ್ಲ ಹಾಗೂ ಸಿ.ಪಿ.ದಿನೇಶ್, ಲಯನೆಸ್ ಅಧ್ಯಕ್ಷೆ ಅರುಣಾಸೋಮಶೇಖರ್, ಪ್ರಾಂತ್ಯದ ಎಲ್ಲಾ ಲಯನ್ ಮತ್ತು ಲಯನೆಸ್ ಕ್ಲಬ್‌ಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಮಾಜಿ ಜಿಲ್ಲಾ ರಾಜ್ಯಪಾಲರುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News