72 ಗಂಟೆಗಳೊಳಗೆ ಸ್ಫೋಟದ ಬೆದರಿಕೆ; ರೈಲುಗಳಲ್ಲಿ ತೀವ್ರ ತಪಾಸಣೆ

Update: 2016-01-03 05:18 GMT

ಹೊಸದಿಲ್ಲಿ, ಜ. 3: ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ವಾಯುಪಡೆ ನೆಲೆಯ ಮೇಲೆ ಶನಿವಾರ ಉಗ್ರರ ದಾಳಿ ನಡೆದ ಬೆನ್ನಿಗೇ ದಿಲ್ಲಿ-ಖಾನ್‌ಪುರ ರೈಲಿನಲ್ಲಿ ಬಾಂಬ್ ಇರಿಸಿರುವುದಾಗಿ ಸೇನೆಗೆ ಇಮೇಲ್ ಸಂದೇಶ ಬಂದಿದೆ. ಮುಂದಿನ 72 ಗಂಟೆಗಳೊಳಗೆ ರೈಲಿನಲ್ಲಿ ಸ್ಫೋಟ ನಡೆಯಲಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದಿಲ್ಲಿ ಸೇರಿದಂತೆ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ದಿಲ್ಲಿ-ಖಾನ್‌ಪುರ ಹಳಿಯಲ್ಲಿ ಸಂಚರಿಸುವ ಎಲ್ಲ ರೈಲುಗಳಲ್ಲಿನ ಪ್ರಯಾಣಿಕರನ್ನು ಹೊರಗೆ ಕಳಿಸಿ ತಪಾಸಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳು ತಡವಾಗಿ ಸಂಚರಿಸಲಿವೆ.
ಬೆದರಿಕೆ ಹಿನ್ನೆಲೆಯಲ್ಲಿ ದಿಲ್ಲಿ-ಲಕ್ನೋ ಎಕ್ಸ್‌ಪ್ರೆಸ್ ರೈಲನ್ನು ಗಾಝಿಯಾಬಾದ್ ನಿಲ್ದಾಣದಲ್ಲಿ ತಡೆದ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಿದೆ. ಇದೇ ವೇಳೆ ತಪಾಸಣೆ ಪೂರ್ತಿಯಾದ ನೀಲಾಂಚಲ್ ಎಕ್ಸ್‌ಪ್ರೆಸ್ ರೈಲು ಪ್ರಯಾಣ ಮುಂದುವರಿಸಿದೆ. ಪಠಾಣ್‌ಕೋಟ್‌ನ ಮೇಲೆ ಉಗ್ರರ ದಾಳಿಯ ಬಳಿಕ ದೇಶದೆಲ್ಲೆಡೆ ಎಚ್ಚರಿಕೆ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News