ಪಠಾಣ್‌ಕೋಟ್‌ನಲ್ಲಿ ಸ್ಫೋಟ; ತನಿಖೆಯ ಹೊಣೆ ಎನ್‌ಐಎ ಹೆಗಲಿಗೆ
Update: 2016-01-03 11:04 IST
ಪಠಾಣ್‌ಕೋಟ್: ಪಠಾಣ್‌ಕೋಟ್ ವಾಯುಪಡೆ ನೆಲೆಯಲ್ಲಿ ತಪಾಸಣೆ ನಡೆಸುವ ಮಧ್ಯೆ ಮತ್ತೆ ಸ್ಫೋಟ ನಡೆದಿದೆ. ಘಟನೆಯಲ್ಲಿ ಸೈನಿಕನೊಬ್ಬನಿಗೆ ಗಾಯವಾಗಿದೆ. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಉಗ್ರರು ಅಡಗಿರಬಹುದು ಎಂಬ ಗುಮಾನಿಯ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಇಂದು ಬೆಳಗ್ಗೆ ತಪಾಸಣೆ ಪುನಾರಂಭಿಸಲಾಗಿತ್ತು. ತಪಾಸಣೆ ವೇಳೆ ಉಗ್ರರ ಕೈಯಲ್ಲಿದ್ದ ಎಕೆ47 ರೈಫಲುಗಳು, ಮಾರ್ಟರ್‌ಗಳು, ಗ್ರನೇಡ್, ಜಿಪಿಎಸ್ ಉಪಕರಣಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಉಗ್ರರ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದೆ. ತನಿಖಾ ಸಂಸ್ಥೆಯ ಸಿಬ್ಬಂದಿ ಈಗಾಗಲೇ ವಾಯುಪಡೆ ನೆಲೆಗೆ ತಲುಪಿದ್ದಾರೆ.
ಉಗ್ರ ದಾಳಿಯ ಹಿಂದೆ ಪಾಕಿಸ್ತಾನ್‌ನ ಜೈಷ್ ಎ ಮುಹಮ್ಮದ್ ಸಂಘಟನೆಯ ಪಾಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಲಿದೆ ಎಂದು ಗೃಹಸಚಿವ ರಾಜ್‌ನಾಥ್ ಸಿಂಗ್ ಈಗಾಗಲೇ ಹೇಳಿದ್ದಾರೆ.