ರಂಜಿತ್ ಫೇಸ್‌ಬುಕ್ ಯುವತಿಗೆ ನೀಡಿದ ಮಾಹಿತಿಯಲ್ಲಿ ಪಠಾಣ್‌ಕೋಟ್ ವಿವರ?
Update: 2016-01-03 11:58 IST
ಹೊಸದಿಲ್ಲಿ: ವಾಯುಸೇನೆಯ ರಹಸ್ಯಗಳನ್ನು ದಾಮಿನಿ ಮೆಕ್‌ನಾಟ್ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಿತಳಾದ ಯುವತಿಯೊಂದಿಗೆ ವಿನಿಮಯ ಮಾಡಿದ ಕಾರಣಕ್ಕೆ ಬಂಧಿತನಾಗಿರುವ ವಾಯುಸೇನೆಯ ಸಿಬ್ಬಂದಿ ಕೆ.ಕೆ.ರಂಜಿತ್, ಪಠಾಣ್‌ಕೋಟ ವಾಯುಪಡೆ ನೆಲೆಯ ವಿವರಗಳನ್ನೂ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐಯೊಂದಿಗೆ ವಿನಿಮಯ ಮಾಡಿಕೊಂಡಿದ್ದಾನೆ ಎಂಬ ಸೂಚನೆಗಳು ಲಭಿಸಿವೆ.
ಕೆಲ ವಿವರಗಳನ್ನು ತನಿಖೆಯ ವೇಳೆ ರಂಜಿತ್ ಒಪ್ಪಿಕೊಂಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಪಠಾಣ್‌ಕೋಟ್ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆಗಾಗಿ ರಂಜಿತ್‌ನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದೆ.
ರಂಜಿತ್‌ನನ್ನು ಕಸ್ಟಡಿಗೆ ನೀಡಬೇಕೆಂಬ ಮನವಿಯಲ್ಲಿಯೂ ಪಠಾಣ್‌ಕೋಟ್ ಮೇಲಿನ ದಾಳಿಯ ಸಂಬಂಧವನ್ನು ತನಿಖಾ ಸಂಸ್ಥೆ ವಿವರಿಸಿದೆ.