×
Ad

ಜ.4: ಕಾಸರಗೋಡಿನಲ್ಲಿ ಜನಪಕ್ಷ ಯಾತ್ರೆ

Update: 2016-01-03 12:04 IST

ಕಾಸರಗೋಡು: ಕೋಮುವಾದ , ಅಸಹಿಷ್ಣುತೆ ಹಾಗೂ ಕೇಂದ್ರ ಸರಕಾರದ ಕೃಷಿ , ಜನ  ವಿರೋಧಿ  ನೀತಿಯ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ 
ಪ್ರತಿಭಟಿಸಿ  ಕೆ .ಪಿ . ಸಿ .ಸಿ ಅಧ್ಯಕ್ಷ  ವಿ . ಎಂ  ಸುಧೀರನ್    ನೇತ್ರತ್ವದಲ್ಲಿ  ಜನಪಕ್ಷ ಯಾತ್ರೆ   ನಾಳೆ ( ೪) ಕಾಸರಗೋಡಿನಿಂದ  ಪ್ರಯಾಣ ಬೆಳಸಲಿದ್ದು , ಫೆಬ್ರವರಿ ಒಂಭತ್ತರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ. ಯಾತ್ರೆಯ  ಉದ್ಘಾಟನೆಗೆ ಕುಂಬಳೆ ಸಜ್ಜಾಗಿದೆ .
ಸಂಜೆ ನಾಲ್ಕು ಗಂಟೆಗೆ ಕುಂಬಳೆ ಯಲ್ಲಿ  ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ  ಯಾತ್ರೆಗೆ ಚಾಲನೆ ನೀಡುವರು .
ಗ್ರಹ ಸಚಿವ  ರಮೇಶ್ ಚೆನ್ನಿತ್ತಲ ಅಧ್ಯಕ್ಷತೆ ವಹಿಸುವರು . ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ  ಮುಕುಲ್ ವಾಸ್ನಿಕ್  ಮಾತನಾಡಲಿರುವರು .
ಸಮಾರಂಭದಲ್ಲಿ ಕೇರಳ  ಮತ್ತು ಕರ್ನಾಟಕದ ಹಲವು  ಸಚಿವರು , ಸಂಸದರು , ಶಾಸಕರು , ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿರುವರು .
ಯಾತ್ರೆಗೆ    ಸಂಜೆ ಆರು ಗಂಟೆಗೆ  ಚೆರ್ಕಳ ದಲ್ಲಿ  ಸ್ವಾಗತ ನೀಡಲಾಗುವುದು . ಐದರಂದು  ಚಟ್ಟ೦ಚಾಲ್, ಕಾನ್ಚಾ೦ಗಾಡ್, ತ್ರಿಕ್ಕರಿಪುರ ದಲ್ಲಿ ಸ್ವಾಗತ ನೀಡಲಾಗುವುದು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News