‘ಪದ್ಮಭೂಷಣ’ಕ್ಕಾಗಿ ನನ್ನನ್ನು ಸಮೀಪಿಸಿದ್ದ ಬಾಲಿವುಡ್ ನಟಿ: ಗಡ್ಕರಿ
ನಾಗ್ಪುರ: ಬಾಲಿವುಡ್‌ನ ಹಿರಿಯ ನಟಿ ಆಶಾ ಪರೇಖ್ ಪದ್ಮಭೂಷಣ ಪ್ರಶಸ್ತಿ ಪಡೆಯುವ ಬಗ್ಗೆ ತನ್ನನ್ನು ಸಮೀಪಿಸಿದ್ದರು ಎಂಬ ಸಂಗತಿಯನ್ನು ಕೇಂದ್ರ ಸಚಿವ ನಿತಿನ್‌ಗಡ್ಕರಿ ಬಯಲುಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಈ ವಿಷಯ ತಿಳಿಸಿದ್ದಾರೆ.
ಪದ್ಮಭೂಷಣ ಪ್ರಶಸ್ತಿಗೆ ತನ್ನ ಹೆಸರನ್ನು ಶಿಫಾರಸು ಮಾಡಬೇಕೆಂಬ ಬೇಡಿಕೆಯೊಂದಿಗೆ ಆಶಾ ಪರೇಖ್ ನನ್ನನ್ನು ಭೇಟಿಯಾಗಿದ್ದರು. ಆದರೆ ಆ ವೇಳೆ ನನ್ನ ಅಪಾರ್ಟ್‌ಮೆಂಟ್‌ನ ಲಿಫ್ಟ್ ಕೆಲಸ ಮಾಡುತ್ತಿರಲಿಲ್ಲ. ಹಾಗಿದ್ದರೂ ಅವರು 12ನೆ ಅಪಾರ್ಟ್‌ಮೆಂಟ್‌ಗೆ ಮೆಟ್ಟಿಲ ಮೂಲಕ ನಡೆದುಕೊಂಡು ಬಂದಿದ್ದರು.
ತನಗೆ ಈಗಾಗಲೇ ಪದ್ಮಶ್ರೀ ಲಭಿಸಿದೆ. ಆದರೆ ಭಾರತೀಯ ಸಿನೆಮಾ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಪದ್ಮಭೂಷಣ ಪುರಸ್ಕಾರಕ್ಕೂ ತಾನು ಅರ್ಹಳೆಂದು ಆಶಾ ಹೇಳಿದ್ದರು ಎಂದು ಗಡ್ಕರಿ ಹೇಳಿದರು.
ಇಂತಹ ಪುರಸ್ಕಾರಗಳು ಕೇಂದ್ರ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ ಎಂದೂ ನಿತಿನ್‌ಗಡ್ಕರಿ ನುಡಿದರು.
ಆಶಾಪರೇಖ್ 1959-73 ದಶಕಗಳಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ್ದರು. ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿಯೂ ಅವರು ಖ್ಯಾತಿಹೊಂದಿದ್ದರು. 1992ರಲ್ಲಿ ಆಶಾಪರೇಖ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.