×
Ad

ಮೆಕ್ಸಿಕೊ: ಹುದ್ದೆಗೇರಿದ ಒಂದೇ ದಿನದಲ್ಲಿ ಗವರ್ನರ್ ಹತ್ಯೆ

Update: 2016-01-03 20:28 IST

 ಮೆಕ್ಸಿಕೊದಲ್ಲಿ ನೂತನ ಗವರ್ನರ್ ಗಿಸೆಲಾ ಮೋಟಾ33(33) ಅಧಿಕಾರ ವಹಿಸಿಕೊಂಡು ಕೆಲವು ತಾಸುಗಳು ಕಳೆಯುವಷ್ಟರಲ್ಲೇ ಹಲವು ಬಂದೂಕುಧಾರಿಗಳ ಗುಂಪೊಂದು ಆಕೆಯ ನಿವಾಸಕ್ಕೆ ತೆರಳಿ ಗುಂಡಿಟ್ಟು ಹತ್ಯೆಗೈದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಮೆಕ್ಸಿಕೊಸಿಟಿಯಿಂದ 90 ಕಿ.ಮೀ. ದೂರದಲ್ಲಿರುವ ಟೆಮಿಕ್ಸ್‌ಕೊ ನಗರದ ಮೇಯರ್ ಆಗಿ ಗಿಸೆಲಾ ಮೋಟಾ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದರು. ನಾಲ್ವರು ಬಂದೂಕುಧಾರಿಗಳ ಗುಂಪೊಂದು ದಾಳಿ ನಡೆಸಿ ಮಹಿಳಾ ಮೇಯರ್ ಗಿಸೆಲಾರನ್ನು ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷವೂ ಹಲವು ಮಂದಿ ಮೇಯರ್‌ಗಳ ಹತ್ಯೆ ಸಂಭವಿಸಿದ್ದು, ಇದು ಮಾದಕ ವಸ್ತುಗಳ ಕಳ್ಳಸಾಗಣೆದಾರರ ಕೃತ್ಯವಾಗಿರಬಹುದೆಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News