×
Ad

ಬೆಳ್ತಂಗಡಿಯಲ್ಲಿ ಪ್ರತಾಪ್‌ಚಂದ್ರ ಶೆಟ್ಟಿಗೆ ಅಭಿನಂದನೆ

Update: 2016-01-03 23:43 IST

ಬೆಳ್ತಂಗಡಿ, ಜ.3: ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದು ವಿಧಾನ ಪರಿಷತ್ ಚುನಾ ವಣೆಯಲ್ಲಿ ಕಾಂಗ್ರೆಸ್ ಗೆಲುವಿನಿಂದ ಸಾಬೀತಾಗಿದೆ. ಇದನ್ನು ಸಾಧ್ಯವಾಗಿಸಿದ್ದು ಪಕ್ಷದ ನಿಷ್ಠಾವಂತ ಜಾಗೃತ ಮತ ದಾರರು ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರುಬೆಳ್ತಂಗಡಿಯಲ್ಲಿ . ಅವರು ಶನಿವಾರ ಬೆಳ್ತಂಗಡಿ ಗುರು ನಾರಾಯಣ ಸಭಾಭವನದಲ್ಲಿ ವಿಧಾನ ಪರಿಷತ್ ಚುನಾವಣೆ ವಿಜೇತ ಪ್ರತಾಪ್‌ಚಂದ್ರ ಶೆಟ್ಟರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾ ಡಿದರು.ಪ್ರತಾಪ ಚಂದ್ರ ಶೆಟ್ಟಿ ಮಾತನಾಡಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಯು.ಆರ್. ಸಭಾ ಪತಿ, ಜಿಲ್ಲಾ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಕೆಪಿಸಿಸಿ ಸದಸ್ಯರಾದ ಶ್ರೀನಿವಾಸ ಕಿಣಿ, ರಾಜಶೇಖರ ಅಜ್ರಿ, ಜಿಪಂ ಸದಸ್ಯ ಶೈಲೇಶ್ ಕುಮಾರ್, ನಪಂ ಅಧ್ಯಕ್ಷೆ ನಳಿನಿ ವಿಶ್ವನಾಥ್, ಜಿಲ್ಲಾ ಕಾಂಗ್ರೆಸ್ ಇತರ ಹಿಂದುಳಿದ ವರ್ಗಗಳ ಸಮಿ ತಿಯ ಅಧ್ಯಕ್ಷ ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು.ಇದೇ ಸಂದರ್ಭ ಶಾಸಕ ವಸಂತ ಬಂಗೇರರ ಅಭಿವೃದ್ಧಿ ಕಾರ್ಯಗಳ ಕ್ಯಾಲೆಂಡರ್‌ನ್ನು ಸಚಿವರು ಬಿಡುಗಡೆ ಗೊಳಿಸಿದರು. ಇದೇ ವೇಳೆ ಬಿಜೆಪಿಯಿಂದ ಮಡಂತ್ಯಾರ್‌ನ ಸತೀಶ್ ಶೆಟ್ಟಿ ಹಾಗೂ ಕುವೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಗೋಪಿನಾಥ್ ನಾಯಕ್ ಮತ್ತು ಕಣಿಯೂರಿನ ಸಂತೋಷ್ ಕುಮಾರ್ ನೇತೃತ್ವದಲ್ಲಿ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
 ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ ಪ್ರಸ್ತಾವಿಸಿ, ಸ್ವಾಗತಿಸಿದರು. ವಕೀಲ ಕೇಶವ ಬೆಳಾಲು ಹಾಗೂ ನಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News