ಕಲ್ಕಟ್ಟ: ರಿಫಾಯಿ ದಫ್ ಕಮಿಟಿಯ ವಾರ್ಷಿಕ, ಮೀಲಾದ್
ಉಳ್ಳಾಲ, ಜ.3: ಕಲ್ಕಟ್ಟದ ಯಾ-ರಿಫಾಯಿ ದಫ್ ಕಮಿಟಿಯ ವಾರ್ಷಿಕ ಹಾಗೂ ಮೀಲಾದ್ ಕಾರ್ಯ ಕ್ರಮ ಇತ್ತೀಚೆಗೆ ಬದ್ರಿಯ ನಗರದ ಪೊಸೋಟು ತಂಙಳ್ ವೇದಿಕೆಯಲ್ಲಿ ನಡೆಯಿತು. ಸೈಯದ್ ಸೈದಲವಿ ತಂಙಳ್ ಕಿನ್ಯ ದುಆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆ.ಎಚ್.ಇಸ್ಮಾಯೀಲ್ ಸಅದಿ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಮೀಂಪ್ರಿ ಮದ್ರಸದ ಮುಅಲ್ಲಿಂ ರಫೀಕ್ ದಾರಿಮಿ ಮಾತನಾಡಿದರು. ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಹುಬ್ಬುರ್ರಸೂಲ್ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಿದರು. ಸೈಯದ್ ಸಿ.ಟಿ.ಎಂ.ಸಲೀಂ ಅಸ್ಸಖಾಫ್ ತಂಙಳ್ ಕೆ.ಸಿ.ರೋಡ್ ದುಆ ನೇತೃತ್ವ ವಹಿಸಿದರು. ಸಚಿವ ಯು.ಟಿ ಖಾದರ್ ದಫ್ ತಂಡವನ್ನು ಸನ್ಮಾನಿಸಿದರು. ಜಿಪಂ ಸದಸ್ಯ ಎನ್.ಎಸ್ ಕರೀಂ, ತಾಪಂ ಸದಸ್ಯ ನೆಕ್ಕರೆ ಬಾವ ಮಂಜನಾಡಿ, ಮಂಜನಾಡಿ ಗ್ರಾಪಂ ಸದಸ್ಯ ಕುಂಞಿ ಬಾವ ಹಾಜಿ ಕಲ್ಕಟ್ಟ, ಕೆ.ಎಸ್.ಅಹ್ಮದ್ ಕುಂಞಿ ಹಾಜಿ, ಆಲಿಕುಂಞಿ ಬಟ್ಯಡ್ಕ, ಕಿನ್ಯ ಗ್ರಾಪಂ ಸದಸ್ಯ ಹಮೀದ್ ಕಿನ್ಯ, ಹನೀಫ್, ಮುಅಲ್ಲಿಂ ಇರ್ಷಾದ್ ಅಝ್‌ಹರಿ, ವಿ.ಎ.ಮುಹಮ್ಮದ್ ಮುಸ್ಲಿಯಾರ್, ಎಸ್‌ವೈಎಸ್ ದೇರಳಕಟ್ಟೆ ಕಾರ್ಯದರ್ಶಿ ಎಂ.ಕೆ.ಎಂ.ಇಸ್ಮಾಯೀಲ್ ಅರಫಾ, ಸೇಕಬ್ಬ ಕಿನ್ಯ, ಉದ್ಯಮಿ ಅಬ್ಬಾಸ್ ಹಾಜಿ ನಾಟೆಕಲ್ ಮತ್ತಿತರರು ಉಪಸ್ಥಿತರಿದ್ದರು.
ಹಿದಾಯತುಲ್ ಝುಹ್‌ರಿ ಸ್ವಾಗತಿಸಿದರು. ಕಮಿಟಿಯ ಅಧ್ಯಕ್ಷ ಕೆ.ಎಂ.ಅಬ್ಬಾಸ್ ಬಟ್ಯಡ್ಕ ವಂದಿಸಿದರು. ಹೈದರಲಿ ನಈಮಿ ಕಾರ್ಯಕ್ರಮ ನಿರೂಪಿಸಿದರು.