×
Ad

ಕಕ್ಕಿಂಜೆ: 10 ಜೋಡಿಗಳ ಸರಳ ಸಾಮೂಹಿಕ ವಿವಾಹ

Update: 2016-01-04 00:28 IST

ಬೆಳ್ತಂಗಡಿ, ಜ.3: ಮನಾರತ್ ಅಲ್ ಮಸಾಅದ್ ವೆಲ್ಫೇರ್ ಅಸೋಸಿಯೇಶನ್ ಕಕ್ಕಿಂಜೆ ಸೆಂಟರ್ ಆಶ್ರಯದಲ್ಲಿ 10 ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭ ಕಕ್ಕಿಂಜೆಯ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿಂದು ಜರಗಿತು.

ದ.ಕ.ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ನಿಖಾಹ್‌ಗೆ ನೇತೃತ್ವ ನೀಡಿದರು. ಶಾಸಕ ವಸಂತ ಬಂಗೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತ ಬೈಲು ದುಆಗೈದರು. ಕಕ್ಕಿಂಜೆ ಮಸೀದಿ ಮುದರ್ರಿಸ್ ಐ.ಕೆ.ಮೂಸಾ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷ ಎಂ.ಎಸ್.ಮುಹಮ್ಮದ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ.ಶಾಹುಲ್ ಹಮೀದ್, ಕೆ.ಎಚ್.ಅಹ್ಮದ್‌ಕುಂಞಿ ಮುಸ್ಲಿಯಾರ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಹನೀಫ್ ಹಾಜಿ, ಗೋಳ್ತಮಜಲು ಹಜಾಜ್ ಸಮೂಹ ಸಂಸ್ಥೆಗಳ ಹಾಜಿ ಸಿ.ಹನೀಫ್, ಜಿಲ್ಲಾ ಮುಸ್ಲಿಂ ಐಕ್ಯತಾ ಸಮಿತಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಪ್ರಗತಿಪರ ಕೃಷಿಕ ಅನಂತ್‌ರಾವ್ ಚಾರ್ಮಾಡಿ ಮುಖ್ಯ ಅತಿಥಿಗಳಾಗಿದ್ದರು. ಕೆಐಸಿ ಕುಂಬ್ರ ಪ್ರೊಫೆಸರ್ ಅನೀಶ್ ಕೌಸರಿ ಉಪನ್ಯಾಸ ನೀಡಿದರು. ಸೈಯದ್ ಜಿಫ್ರಿ ಜುನೈದ್ ತಂಙಳ್, ಉಜಿರೆ ಜಿಪಂ ಸದಸ್ಯ ಕೆ.ಕೊರಗಪ್ಪನಾಯ್ಕ, ಕಕ್ಕಿಂಜೆ ಮಸೀದಿ ಅಧ್ಯಕ್ಷ ಅಬ್ದುಲ್ಲಾ ಹಾಜಿ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ.ನಝೀರ್, ಎಸಿಇ ಪೈಪ್‌ಲೈನ್ ಮ್ಯಾನೇಜರ್ ಅಜೆಯ್ ಸಿಂಗ್ ಡಿ.ಜಿ., ಉಜಿರೆ ಮಸೀದಿಯ ಅಧ್ಯಕ್ಷ ಬಿ.ಎಂ.ಅಬ್ದುಲ್ ಹಮೀದ್, ಯು.ಎ.ಹಮೀದ್, ಅರೆಕ್ಕಲ್ ಮಮ್ಮಿ ಕುಂಞಿ, ಸಾಲಿ ಹಾಜಿ, ದಾವೂದ್ ಹಾಜಿ, ಕಕ್ಕಿಂಜೆ ಮಸೀದಿಯ ಮಾಜಿ ಅಧ್ಯಕ್ಷರಾದ ಪಿ.ಎಚ್.ಹಸೈನಾರ್ ಹಾಜಿ, ಪಿ.ಕೆ.ಮೊಯ್ದಿನ್‌ಕುಂಞಿ ಹಾಜಿ, ಎ.ಕೆ.ಮುಹಮ್ಮದ್ ಹಾಝಿ ಅಡ್ಡೂರು, ನೆರಿಯ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಬಲಿಪಾಯ, ಹಂಝ ಮುಸ್ಲಿಯಾರ್, ಸಂಚಾಲಕ ಇಲ್ಯಾಸ್, ಕಾರ್ಯದರ್ಶಿ ಅಬ್ದುಲ್ ಬಶೀರ್ ಉಪಸ್ಥಿತರಿದ್ದರು. ನವಾಝ್ ಅಝ್‌ಹರಿ ಕಿರಾಅತ್ ಪಠಿಸಿದರು. ಅಸೋಸಿಯೇಶನ್ ಅಧ್ಯಕ್ಷ, ಹಾಜಿ ಹಸನಬ್ಬ ಚಾರ್ಮಾಡಿ ಸ್ವಾಗತಿಸಿದರು. ಇದೇ ಸಂದರ್ಭ ಕಕ್ಕಿಂಜೆ ಮಸೀದಿಯಲಿ 63 ವರ್ಷ ಮುಅದ್ದಿನ್ ಆಗಿ ಸೇವೆ ಸಲ್ಲಿಸಿದ ಕೆ.ಎಚ್ ಹೈದರ್ ಹಾಜಿಯವರನ್ನು ಸನ್ಮಾನಿಸಲಾಯಿತು. ಶರೀಫ್ ಸನ್ಮಾನಪತ್ರ ವಾಚಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ವಧುವಿಗೆ 5 ಪವನ್ ಚಿನ್ನ, 25 ಸಾವಿರ ರೂ. ಬೆಲೆಯ ವಸ್ತ್ರ ಮತ್ತು ಅಲಂಕಾರಿಕ ಸಾಮಗ್ರಿಗಳು, ವರನಿಗೆ ವಿವಾಹ ವಸ್ತ್ರ ಖರೀದಿಗೆ 10 ಸಾವಿರ ರೂ. ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News