×
Ad

ಉಳ್ಳಾಲದಲ್ಲಿ ಇಲಲ್ ಹಬೀಬ್ ಮೀಲಾದ್ ರ್ಯಾಲಿ

Update: 2016-01-04 00:28 IST

ಉಳ್ಳಾಲ, ಜ.3: ಇಲಲ್ ಹಬೀಬ್ ಮೀಲಾದ್ ಪ್ರಯುಕ್ತ ‘ಸ್ನೇಹ ಸಮಾಜದ ಸೃಷ್ಟಿಗಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್‌ವೈಎಸ್ ಉಳ್ಳಾಲ ಸೆಂಟರ್, ಎಸ್ಸೆಸ್ಸೆಫ್ ತೊಕೊಟ್ಟು ಮತ್ತು ಉಳ್ಳಾಲ ಸೆಕ್ಟರ್ ಅಶ್ರಯದಲ್ಲಿ ರವಿವಾರ ಮೀಲಾದ್ ರ್ಯಾಲಿ ನಡೆಯಿತು.

ತೊಕ್ಕೊಟ್ಟು ಬಸ್ ನಿಲ್ದಾಣದಿಂದ ಉಳ್ಳಾಲ ದರ್ಗಾವರೆಗೆ ನಡೆದ ರ್ಯಾಲಿಯನ್ನುದ್ದೇಶಿಸಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷ ಸಿರಾಜ್ ಸಖಾಫಿ ಕನ್ಯಾನ ಸಂದೇಶ ಭಾಷಣ ಮಾಡಿದರು.

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನಿರ್ದೇಶಕ ಎಂ.ಸಿ.ಮುಹಮ್ಮದ್ ಫೈಝಿ ಪಟಾಂಬಿ ದುಆ ನೆರವೇರಿಸಿ ರ್ಯಾಲಿಗೆ ಚಾಲನೆ ನೀಡಿದರು. ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಯು.ಎಸ್.ಹಂಝ ಮಾತನಾಡಿ ಶುಭಹಾರೈಸಿದರು.

ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಅಧ್ಯಕ್ಷತೆ ವಹಿಸಿದ್ದರು.

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಅಬ್ದುಸ್ಸಮದ್ ಅಹ್ಸನಿ, ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಂಬ್ಲಮೊಗರು, ಉಳ್ಳಾಲ ದರ್ಗಾ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಹನೀಫ್ ಬಿ.ಜಿ., ಮಂಜನಾಡಿ ಅಲ್-ಮದೀನಾ ಮುದರ್ರಿಸ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಅಶ್ರಫ್ ಬಳ್ಳಾರಿ, ನಾಝೀಂ ಮುಕ್ಕಚ್ಚೇರಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಅಲ್-ಅಮೀನ್ ರಿಲೀಫ್ ಫೌಂಡೇಶನ್‌ನ ಮನ್ಸೂರ್ ಹಳೆಕೋಟೆ, ಖುಬೈಬುಲ್ಲಾ ತಂಙಳ್, ತ್ವಾಹಿರ್ ಹಾಜಿ, ಇಸ್ಹಾಕ್ ಬಸ್ತಿಪಡ್ಪುಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News