ಸುವರ್ಣ ಕಳಶ ಸಮರ್ಪಣಾ ಮೆರವಣಿಗೆ
Update: 2016-01-04 00:31 IST
ಉಡುಪಿ, ಜ.3: ಉಡುಪಿ ರಥಬೀದಿಯ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರೆಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುವರ್ಣ ಕಳಶದ ಸಮರ್ಪಣೆಯ ಮೆರವಣಿಗೆಯು ಇಂದು ಜರಗಿತು.
ಮಂತ್ರಾಲಯದ ಶ್ರೀಸುಭುದೇಂದ್ರ ತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಕಳಶವನ್ನು ಸಮರ್ಪಿಸಲಾಯಿತು. ಈ ಸಂದರ್ಭ ಜ್ಯೋತಿಷ್ಯ ವಿದ್ವಾನ್ ಪದ್ಮನಾಭ ಶರ್ಮ, ರಂಗನಾರಾಯಣ ಭಟ್, ಮಂತ್ರಾಲಯದ ವಾದಿರಾಜ ಆಚಾರ್ಯ, ಪಂಜ ಭಾಸ್ಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.