ಅರುಣ್ ಜೇಟ್ಲಿ ವಿರುದ್ಧ ಆಪ್ ಧರಣಿ
Update: 2016-01-04 00:31 IST
ಸುಳ್ಯ, ಜ.3: ಡಿಡಿಸಿಎ ಹಗರಣದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಶಾಮೀಲಾಗಿದ್ದಾರೆಂದು ಆರೋಪಿಸಿ, ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ವತಿಯಿಂದ ಧರಣಿ ನಡೆಯಿತು.
ಧರಣಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಚಂದನ್, ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಮಕೃಷ್ಣ ಬೀರಮಂಗಲ, ಮುಖಂಡ ಕೃಷ್ಣಕುಮಾರ್, ಸಂಚಾಲಕ ಬಶೀರ್ ಜಟ್ಟಿಪಳ್ಳ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಅಲೆಕ್ಸಾಂಡರ್, ಸನಿಲ್ ಡಿಸೋಜ, ದೇವಿಪ್ರಸಾದ್, ಜೆ.ಎಂ.ಡಿಸೋಜ, ಜಯಮ್ಮ, ರೋಹನ್ ಸಿರಿ, ಶಮ್ಮಿಸಿರಿ, ಪುತ್ತೂರಿನ ಮುಖಂಡರಾದ ರಾಧಾಕೃಷ್ಣ ನಾಯಕ್, ಆನಂದ ಗೌಡ, ಸುಳ್ಯದ ಮುಖಂಡರಾದ ಕೇಪುತೊಡಿಕಾನ, ಕೃಷ್ಣೇ ಗೌಡ ಅರಂತೋಡು ಮತ್ತಿತರರು ಉಪಸ್ಥಿತರಿದ್ದರು.