×
Ad

ಲ್ಯಾಂಡ್ ಲಿಂಕ್ಸ್: ಕ್ಯಾಶ್‌ಬ್ಯಾಕ್ ಯೋಜನೆ 50 ಫ್ಲಾಟ್‌ಗಳಿಗೆ ವಿಸ್ತರಣೆ

Update: 2016-01-04 00:31 IST

ಮಂಗಳೂರು, ಜ.3: ಪ್ರತಿಷ್ಠಿತ ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ ‘ಕ್ಯಾಶ್ ಬ್ಯಾಕ್ ಪಾಲಿಸಿ’ಯ್ನು ಇನ್ನೂ 15 ಫ್ಲಾಟ್‌ಗಳಿಗೆ ಹೆಚ್ಚಿಸಿ, ಒಟ್ಟು ವ್ಯಾಪ್ತಿಯನ್ನು 50 ಫ್ಲಾಟ್‌ಗಳಿಗೆ ವಿಸ್ತರಿಸಿದೆ ಎಂದು ಲ್ಯಾಂಡ್‌ಲಿಂಕ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಜೆ.ಕೃಷ್ಣ ಪಾಲೆಮಾರ್ ತಿಳಿಸಿದ್ದಾರೆ.

35ನೆ ವರ್ಷದ ಸಂಭ್ರಮಾಚರಣೆಯಲ್ಲಿರುವ ‘ಲ್ಯಾಂಡ್‌ಲಿಂಕ್ಸ್’ ಈ ಸಂದರ್ಭ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ ‘ಲ್ಯಾಂಡ್‌ಲಿಂಕ್ಸ್ ನಿರ್ಮಾಣದ ಮನೆ ಖರೀದಿಸಿ- ಮನೆ ಖರೀದಿಗೆ ಪಾವತಿಸಿದ ಹಣವನ್ನು 25 ವರ್ಷಗಳ ಬಳಿಕ ಹಿಂಪಡೆಯಿರಿ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಬ್ಯಾಂಕ್ ಮುಂಗಡ ಸಹಿತವಾದ ಖರೀದಿಗೂ ಈ ಯೋಜನೆ ಅನ್ವಯವಾಗಲಿದೆ.

ಜ.20ರವರೆಗೆ ವಿಸ್ತರಣೆ: ಈ ಯೋಜನೆಗೆ ಗ್ರಾಹಕರಿಂದ ಅಭೂತಪೂರ್ವ ಬೆಂಬಲ ದೊರೆತಿದ್ದು, ಈ ಸೌಲಭ್ಯವನ್ನು ಹೆಚ್ಚುವರಿಯಾಗಿ 15 ಫ್ಲಾಟ್‌ಗಳಿಗೆ ವಿಸ್ತರಿಸಲು ತೀರ್ಮಾನಿಸಿದ್ದು, ಈ ಮೂಲಕ 50 ಮಂದಿಗೆ ಫ್ಲಾಟ್‌ಗಳು ಲಭ್ಯವಾಗಲಿವೆ. ಅಲ್ಲದೆ ಜ.15ರವರೆಗೆ ಇದ್ದ ಈ ಯೋಜನೆಯನ್ನು ಜ.20 ರವರೆಗೆ ವಿಸ್ತರಿಸಲಾಗಿದೆ ಎಂದು ಪಾಲೆಮಾರ್ ತಿಳಿಸಿದ್ದಾರೆ.

 ಕ್ಯಾಶ್‌ಬ್ಯಾಕ್ ಪಾಲಿಸಿ ಯೋಜನೆಯಲ್ಲಿ ಒಂದು ಕುಟುಂಬ ಒಂದು ಮನೆಯನ್ನು ಖರೀದಿಸಬಹುದು. ಬ್ಯಾಂಕ್ ಮುಂಗಡ ಪಡೆದವರಿಗೆ ಬ್ಯಾಂಕ್ ನಿಯಮಾನುಸಾರ ಒಪ್ಪಂದ ನಡೆಸಲಾಗುತ್ತದೆ. ಆಸಕ್ತರು ಕೂಡಲೇ ಸಂಸ್ಥೆಯನ್ನು ಸಂಪರ್ಕಿಸುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News