ಶಿಕ್ಷಣ ತಜ್ಞ ಶಂಕರರಾವ್‌ರಿಗೆ ಅಭಿನಂದನೆ
ಮಂಗಳೂರು, ಜ.3: ಶಿಕ್ಷಣ ತಜ್ಞ ಹಾಗೂ ಸಮಾಜಶಾಸಜ್ಞ ಶಂಕರರಾವ್‌ರಿಗೆ ರವಿವಾರ ಉರ್ವ ಕೆನರಾ ಹೈಸ್ಕೂಲ್‌ನಲ್ಲಿ ಅಭಿನಂದನೆ ಏರ್ಪಡಿಸಲಾಗಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿ, ಶಂಕರ ರಾವ್‌ರ ಜೀವನ ತೆರೆದಿಟ್ಟ ಪುಸ್ತಕವಾಗಿದೆ. ಇಂತಹವರ ವ್ಯಕ್ತಿತ್ವವನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು ಎಂದರು.
ನಿಟ್ಟೆ ವಿವಿ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ೇದಿಕೆಯಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್.ಕಾಮತ್, ಎಬಿವಿಪಿ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ವಿನಯ್ ಬಿದಿರೆ, ಅಭಿನಂದನಾ ಸಮಿತಿಯ ಸಂಯೋಜಕ ರಮೇಶ್, ಸರಸ್ವತಿ ಶಂಕರ್‌ರಾವ್ ಉಪಸ್ಥಿತರಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್ ಸ್ವಾಗತಿಸಿದರು. ಆಳ್ವಾಸ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರಮೇಶ್ ಕೆ. ವಂದಿಸಿ ದರು. ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪುಸ್ತಕ ಬಿಡುಗಡೆ: ಈ ಸಂದರ್ಭದಲ್ಲಿ ಶಂಕರ ದರ್ಶನ ಅಭಿನಂದನಾ ಗ್ರಂಥ, ಸಮಾಜಶಾಸ ಪುಸ್ತಕ ಹಾಗೂ ‘ದೀನದಯಾಳ್‌ಜೀ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.