×
Ad

ಕುಂಟಾಡಿ ರಕ್ತೇಶ್ವರಿ ದೇವಳದಲ್ಲಿ ಕಳವು

Update: 2016-01-04 00:41 IST

6 ಲಕ್ಷ ವೌಲ್ಯದ ಬೆಳ್ಳಿಯಾಭರಣ ಲೂಟಿ

ಕಾರ್ಕಳ, ಜ.3: ಕಲ್ಯಾ ಗ್ರಾಮದ ಕುಂಟಾಡಿ ರಕ್ತೇಶ್ವರಿ ದೇವಸ್ಥಾನಕ್ಕೆ ಹಿಂಬಾಗಿಲಿನಿಂದ ಒಳನುಗ್ಗಿದ ಕಳ್ಳರು 6 ಲಕ್ಷ ರೂ. ವೌಲ್ಯದ ಕಂಚು ಮತ್ತು ಬೆಳ್ಳಿಯ ಆಭರಣವನ್ನು ಕದ್ದೊಯ್ದಿದ್ದಾರೆ.

ಶನಿವಾರ ರಾತ್ರಿ ಈ ಕಳವು ನಡೆದಿದ್ದು, ರವಿವಾರ ಮುಂಜಾನೆ ದೇವಸ್ಥಾನಕ್ಕೆ ಅರ್ಚಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. 4 ಕಂಚಿನ ವಿಗ್ರಹಗಳು, ಗರ್ಭಗುಡಿಗೆ ಅಳವಡಿಸಿದ್ದ ಬೆಳ್ಳಿಯ ತಗಡು ಕಳವಾಗಿದೆ. ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ದೇವಳದಲ್ಲಿ ದೀಪದೆಣ್ಣೆ ಚೆಲ್ಲಿದ ಪರಿಣಾಮ ಯಾವುದೇ ಸುಳಿವು ಲಭ್ಯವಾಗಿಲ್ಲ. ಬ್ರಹ್ಮವಾರ, ಕಾಪುವಿನಲ್ಲಿ ಕಳ್ಳತನವಾದ ಮಾದರಿಯಲ್ಲಿ ಇಲ್ಲೂ ಕಳ್ಳತನವಾಗಿದೇ ಒಂದೇ ತಂಡ ಈ ಕಳವು ನಡೆಸಿರುವ ಶಂಕೆ ಇದೆ. ದೇವರಹುಂಡಿಯಲ್ಲಿ ಸ್ವಲ್ಪ ಹಣವಿತ್ತು. ಅದನ್ನು ಕಳ್ಳರು ಬಿಟ್ಟು ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News