ಜ.9ರಂದು ಎಂಡೋ ಪೀಡಿತರಿಗೆ ಗುರುತಿನ ಚೀಟಿ, ಕಿಟ್ ವಿತರಣೆ
Update: 2016-01-04 12:10 IST
ನಾರಾವಿ: ಎಂಡೋಪೀಡಿತರಿಗೆ ಜಿಲ್ಲಾಡಳಿತದಿಂದ ಗುರುತಿನ ಚೀಟಿ ವಿತರನೆ ಹಾಗೂ ಲಯನ್ಸ್ ಕ್ಲಬ್ ನಾರಾವಿ, ಲಯನ್ಸ್ ಕ್ಲಬ್ ಶಿರ್ತಾಡಿ, ಲಯನ್ಸ್ ಕ್ಲಬ್ ವೇಣೂರು,ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಿತ ಇತರ ಸಂಘ ಸಂಸ್ಥೆಗಳ ಸಹಯೊಗದಲ್ಲಿ ಉಚಿತವಾಗಿ ೨೮ ಗಾಲಿ ಕುರ್ಚಿ, ೩೫ ವಾಟರ್ ಬೆಡ್ ಹಾಗೂ ವಾಕರ್ ಮತ್ತು ೩೪೪ ಎಂಡೋಪೀಡಿತರಿಗೆ ಕಿಟ್ ವಿತರಣೆಯು ಜ.೯ರಂದು ಬೆಳಿಗ್ಗೆ ೧೦ ಗಂಟೆಗೆ ನಾರಾವಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಲಿದೆ ಎಂದು ನಾರಾವಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಮಚಂದ್ರ ಸೋಮವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.