ಅಕಾಸ್ಮಾತ್ ಬಾವಿಗೆ ಬಿದ್ದು ಸಾವು
Update: 2016-01-04 19:44 IST
ಕಿನ್ನಿಗೋಳಿ, ಜ.4: ವ್ಯಕ್ತಿಯೋರ್ವರು ಅಕಾಸ್ಮಾತ್ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಕಿನ್ನಿಗೋಳಿ ಸಮೀಪದ ಮಾರಡ್ಕ ಕಂಬ್ಳ ಎಂಬಲ್ಲಿ ನಡೆದಿದೆ.
ಮೃತರನ್ನು ಇಲ್ಲಿನ ಸ್ಥಳೀಯ ನಿವಾಸಿ ವಲೇರಿಯನ್ ಡಿ, ಸೋಜಾ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಮಾರಡ್ಕ ಕಂಬ್ಳ ನಿವಾಸಿ ಆಲ್ಫ್ರೆಡ್ ಡಿ ಕುನ್ಹಾ ಎಂಬವರ ಮನೆಯ ಬಾವಿಗೆ ಸತ್ತು ಬಿದ್ದಿದ್ದ ಹಾವನ್ನು ತೆಗೆಯಲೆಂದು ಹಗ್ಗ ಬಳಸಿ ಬಾವಿಗೆ ಇಳಿಯುತ್ತಿದ್ದ ವೇಳೆ ಹಟಾತ್ತಣೆ ಹಗ್ಗ ತುಂಡಾಗಿ ಬವಿಗೆ ಬಿದ್ದು ಮೃತ ಪಟ್ಟಿದ್ದಾಋಎ ಎಂದು ತಿಳಿದುಬಂದಿದೆ.
ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಮೇಲೆತ್ತಲು ಮುಂದದರೂ ಬಾವಿ ಅಳವಾಗಿದ್ದ ಕಾರಣ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದ್ದು, ಬಳಿಕ ಬಂದ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಮೇಲೆತ್ತಿದ್ದರು ಎಂದು ತಿಳಿದು ಬಂದಿದೆ.
ಮೃತ ವಲೇರಿಯನ್ ಡಿ, ಸೋಜಾ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ತಿಇಳಿದು ಬವಂದಿದೆ.