×
Ad

ಬಜ್ಪೆ: ರಸ್ತೆ ದುರಸ್ಥಿಗೆ ಆಗ್ರಹಿಸಿ ಎಸ್.ಡಿ.ಪಿ.ಐ.ಪ್ರತಿಭಟನೆ

Update: 2016-01-04 20:33 IST

 ಮಂಗಳೂರು,ಜ.4: ನಬಾರ್ಡ್ ಯೋಜನೆಯಡಿ ರಾಜ್ಯ ಹೆದ್ದಾರಿ 67ರ ಬಜ್ಪೆ ಪೇಟೆಯಲ್ಲಿ 75ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಉದ್ಘಾಟನೆಗೊಂಡು 4 ತಿಂಗಳು ಕಳೆದರೂ, ಸೇತುವೆ ಮತ್ತು ರಸ್ತೆಯ ನಡುವಿನ ರಸ್ತೆಗೆ ಡಾಮರೀಕರಣ ಮಾಡದೆ ವಿಳಂಬ ಮಾಡಿರುವುದನ್ನು ಖಂಡಿಸಿ ಎಸ್.ಡಿ.ಪಿ.ಐ ಇಂದು ಬಜ್ಪೆಯಲ್ಲಿ ಪ್ರತಿಭಟನೆ ನಡೆಸಿತು.

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ.ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಸಮಿತಿಯ ಅಧ್ಯಕ್ಷ ಎ.ಕೆ.ಅಶ್ರಫ್ ಕಳೆದ ಆಗಸ್ಟ್ ತಿಂಗಳಲ್ಲಿ ಸೇತುವೆ ಕಾಮಗಾರಿ ಮಾಡಲಾಗಿದ್ದರೂ, ಸೇತುವೆ ಮತ್ತು ರಸ್ತೆಗೆ ಸಂಪರ್ಕ ಕಲ್ಪಿಸುವ ದಾರಿಗೆ ಡಾಮರೀಕರಣ ಮಾಡದ ಗುತ್ತಿಗೆದಾರರೊಂದಿಗೆ ಕೆಲಸ ಮಾಡುವಂತೆ ಯಾವುದೇ ಒತ್ತಡ ಮಾಡದೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

   ಧೂಳಿನಿಂದ ಆವೃತ್ತವಾದ ರಸ್ತೆಯ ಎರಡೂ ಕಡೆಗಳಲ್ಲಿರುವ ಅಂಗಡಿ ಮಾಲಕರು ಧೂಳಿನ ಸಮಸ್ಯೆಯಿಂದ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ .ಮಾತ್ರವಲ್ಲದೆ ಸದ್ರಿ ರಸ್ತೆಯ ಧೂಳಿನಿಂದ ಪಾದಚಾರಿಗಳು ನಡೆದಾಡುವಂತಿಲ್ಲ .ಬಹಳಷ್ಟು ಶಾಲಾ ಕಾಲೇಜಿನ ಮಕ್ಕಳು ನಡೆದಾಡಲು ಇದೇ ರಸ್ತೆಯನ್ನು ಹೊಂದಿಕೊಂಡಿದ್ದು ಧೂಳಿನ ಸಮಸ್ಯೆಯಿಂದ ಮೂಗು ಮುಚ್ಚಿ ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

 ಮತ್ತು ಹಲವು ದ್ವಿಚಕ್ರ ವಾಹನ ಅಪಘಾತಕ್ಕೂ ಕಾರಣವಾಗಿದ್ದು ಈ ಕಾಮಗಾರಿಯ ಗುತ್ತಿಗೆದಾರರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಬೇಜವಬ್ದಾರಿಯ ವರ್ತನೆಯಾಗಿದೆ ಎಂದು ಟೀಕಿಸಿದರು.

ಪ್ರತಿಭಟನೆಯ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶ್ರೀಧರ್ ಆಗಮಿಸಿ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ ತತ್ ಕ್ಷಣ ಕಾಮಗಾರಿ ಆರಂಭಿಸಿ ಎರಡು ಮೂರು ದಿನಗಳೊಳಗೆ ಡಾಮರೀಕರಣ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು.

 ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ.ಜಿಲ್ಲಾ ಸಮಿತಿ ಸದಸ್ಯ ಇಸ್ಮಾಯಿಲ್ ಇಂಜಿನಿಯರ್,ಬಜ್ಪೆ ಪಂಚಾಯತ್ ಸದಸ್ಯ ನಝೀರ್ ಕಿನ್ನಿಪದವು,ರಫೀಕ್ ಶಾಂತಿಗುಡ್ಡೆ,ಪಿ.ಎಫ್.ಐ.ಮುಖಂಡರಾದ ಯಹ್ಯಾ, ಹಕೀಮ್ ಕೊಳಂಬೆ, ಸ್ಥಳೀಯ ಗಣ್ಯರಾದ ಉಙಾಕ ಪಯಣಿಗ, ಮೋನಾಕ ಮುಂತಾದವರು ಉಪಸ್ಥಿತರಿದ್ದರು.ಎಸ್.ಡಿ.ಪಿ.ಐ. ಕ್ಷೇತ್ರ ಜೊತೆ ಕಾರ್ಯದರ್ಶಿ ಜಮಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News