ಎನ್‌ಡಬ್ಲುಎಫ್ ರಾಜ್ಯಾಧ್ಯಕ್ಷೆಯಾಗಿ ಫಾತಿಮಾ ನಸೀಮಾ ಆಯ್ಕೆ
ಪುತ್ತೂರು, ಜ.4: ಎನ್‌ಡಬ್ಲುಎಫ್ ರಾಜ್ಯ ಪ್ರತಿನಿಧಿ ಸಮಾವೇಶವು ಕಬಕ ಸಮೀಪದ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.ಈ ಸಂದರ್ಭ 2016-17ರ ಅವಧಿಗೆ ರಾಜ್ಯ ಪದಾಧಿಕಾರಿಗಳ ಚುನಾವಣೆ ನಡೆಸಲಾಯಿತು. ರಾಜ್ಯಾಧ್ಯಕ್ಷೆಯಾಗಿ ಫಾತಿಮಾ ನಸೀಮಾ, ರಾಜ್ಯ ಕಾರ್ಯದರ್ಶಿಯಾಗಿ ಸಯೀದಾ ಯೂಸುಫ್, ಉಪಾಧ್ಯಕ್ಷೆಯಾಗಿ ದಿಲ್‌ದಾರ್, ಉತ್ತರ ಕನ್ನಡ ಕಾರ್ಯದರ್ಶಿಗಳಾಗಿ ಶಬನಾ ಬೆಂಗಳೂರು, ಝೀನತ್ ಬಂಟ್ವಾಳ, ಕೋಶಾಧಿಕಾರಿಯಾಗಿ ತಬಸ್ಸುಮ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆಯರಾಗಿ ಝರೀನಾ, ತರನ್ನುಮ್, ಆಯಿಶಾ, ಕುಬ್‌ರಾ, ಶಾಹಿದ ತಸ್ನಿಮಾ, ನಝೀಪ ಮತ್ತು ಫರ್ಝಾನ ಮಂಗಳೂರು ಆಯ್ಕೆಯಾದರು.
ರಾಜ್ಯ ಕಾರ್ಯದರ್ಶಿ ಲುಬ್ನಾ ಮಿನಾಝ್ ಶೇಖ್ ಕಳೆದ ಸಾಲಿನ ವರದಿ ಮಂಡಿಸಿದರು. ಎನ್‌ಡಬ್ಲುಎಫ್ ರಾಷ್ಟ್ರಾಧ್ಯಕ್ಷೆ ಶಾಹಿದಾ ಎ. ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಫರೀದಾ ಹಸನ್‌ರ ಉಪಸ್ಥಿತರಿದ್ದರು.
ಎರಡು ದಿನದ ಈ ಸಮಾವೇಶದಲ್ಲಿ ಮಹಿಳೆಯರ ಕುಟುಂಬಿಕ ಸಾಮಾಜಿಕ ಜವಾಬ್ದಾರಿಗಳ ವಿಷಯದಲ್ಲಿ ವಿಚಾರಗೋಷ್ಟಿ ಹಾಗೂ ಉತ್ತಮ ಸಮಾಜ ಮತ್ತು ಸಮುದಾದ ನಿರ್ಮಾಣದಲ್ಲಿ ಮಹಿಳೆಯ ಜವಾಬ್ದಾರಿಗಳ ಬಗ್ಗೆ ಚರ್ಚಾಗೋಷ್ಠಿ ನಡೆಯಿತು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
1.ಅಸಹಿಷ್ಣುತೆ ದೇಶದೆಲ್ಲೆಡೆ ಇತ್ತೀಚಿಗೆ ಚರ್ಚಾ ವಿಷಯವಾಗಿದ್ದು, ಇದು ಕೋಮುದ್ವೇಷ ರಾಜಕಾರಣದ ಫಲವಾಗಿದೆ. ದೇಶದ ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಾತ್ಯಾತೀತತೆಯನ್ನು ಸಂವಿಧಾನವನ್ನು ಗಟ್ಟಿಗೊಳಿಸುವುದಾಕ್ಕಾಗಿ ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ ಕಾರ್ಯಪ್ರವೃತ್ತವಾಗಬೇಕೆಂದು ಈ ಸಭೆಯು ಒತ್ತಾಯಿಸುತ್ತದೆ.
2.ನಿರ್ಭಯ ಪ್ರಕರಣದ ತೀರ್ಪಿನಿಂದಾಗಿ ದೇಶದಲ್ಲಿ ಬಾಲಾಪರಾದಿಗಳ ಬಗ್ಗೆ ಹೊಸ ಕಾನೂನು ರಚನೆಯಾಗಿದ್ದು, ಈ ನಿಟ್ಟಿನಲ್ಲಿ ಬರೇ ಕಾನೂನು ರಚನೆಯಿಂದ ಬಾಲಾಪರಾಧವನ್ನು ತಡೆಗಟ್ಟುವುದು ಸಾಧ್ಯವಿಲ್ಲವೆಂದು ಈ ಸಬೆಯ ಅಭಿಪ್ರಾಯವಾಗಿದೆ. ಸಾಮಾಜಿಕ ತಾಣ ಮತ್ತು ಮಾಧ್ಯಮಗಳಲ್ಲಿ ಬಾಲಾಪರಾಧಿಗಳಿಗೆ ಪ್ರಚೋಧನೆ ನೀಡುವಂತಹ ಪ್ರಸಾರಗಳನ್ನು ಸರ್ಕಾರವು ನಿಯಂತ್ರಿಸಬೇಕೆಂದು ಈ ಸಭೆ ಒತ್ತಾಯಿಸುತ್ತದೆ.
3.ದಿನ ಬಳಕೆ ವಸ್ತುಗಳಾದ ಹಾಲು, ಅಡುಗೆ ಅನಿಲ, ಪಡಿತರ ವಸ್ತುಗಳ ಬೆಲೆೆಯೇರಿಕೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದ್ದು ನಮ್ಮನ್ನು ಆಳುವ ಸರಕಾರವು ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿ ಮತ್ತು ಉದ್ಯಮಿಗಳ ಪರವಾಗಿ ಕಾರ್ನಿರ್ವಹಿಸುತ್ತಾ ಇದೆ. ಈ ನಿಟ್ಟಿನಲ್ಲಿ ಸರಕಾರವು ಬಡವರ ಬಗ್ಗೆ ಗಮನಹರಿಸಿ ಬೆಲೆ ನಿಯಂತ್ರಣದ ಬಗ್ಗೆ ಕಠಿಣ ಕಾನೂನುನ್ನು ಕೈಗೊಳ್ಳಬೇಕೆಂದು ಈ ಸಭೆ ಒತ್ತಾಯಿಸುತ್ತದೆ.
4.ಇತ್ತೀಚೆಗೆ ಬಂದ ವರದಿಯ ಪ್ರಕಾರ ಮಹಿಳಾ ಅನಕ್ಷರತೆ 50 ಶೇ. ಜಾಸ್ತಿಯಾಗಿದ್ದು, ಅದರಲ್ಲೂ ಮುಸ್ಲಿಂ ಮಹಿಳೆಯರ ಸಂಖ್ಯೆಯು ಹೆಚ್ಚಿದ್ದು ಮಹಿಳೆಯರನ್ನು ಅಕ್ಷರಸ್ತರಾಗಿಸುವಲ್ಲಿ ಕಾರ್ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ಈ ಸಬೆಯು ಸರಕಾರವನ್ನು ಒತ್ತಾಯಿಸುತ್ತದೆ.