ಮೇಲಂಗಡಿ: ಪ್ರತಿಭಾ ಕಾರ್ಯಕ್ರಮ
ಉಳ್ಳಾಲ, ಜ.4: ಇಲ್ಲಿನ ಮೇಲಂಗಡಿಯ ಖಂಝುಲ್ ಉಲೂಂ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಯು.ಎಸ್.ಹಂಝರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹ್ ದುಆ ನೆರವೇರಿಸಿದರು. ಸಚಿವ ಯು.ಟಿ.ಖಾದರ್, ಸೈಯದ್ ಮದನಿ ಅರಬಿಕ್ ಟ್ರಸ್ಟಿನ ಮುಫತ್ತಿಸ್ ಸುಲೈಮಾನ್ ಸಖಾಫಿ ಮುಖ್ಯ ಅತಿಥಿಗಳಾಗಿದ್ದರು. ಬಾವಾ ಅಝಾದ್‌ನಗರ, ಫಾರೂಕ್ ಉಳ್ಳಾಲ್, ದರ್ಗಾ ಸಮಿತಿಯ ಸದಸ್ಯರಾದ ಅಮೀರ್, ಅಬ್ಬಾಸ್, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಬಾವಾ ಇಸ್ಮಾಯೀಲ್, ಮುಸ್ತಫಾ ಮಂಚಿಲ, ಫಕೀರ್ ಸಾಬ್, ಕಡಪುರ ಮಸೀದಿಯ ತೌಫೀಕ್, ಮಿಲ್ಲತ್ ನಗರ ಮಸೀದಿಯ ಖಲೀಲ್, ದರ್ಗಾ ಸಮಿತಿ ಮಾಜಿ ಉಪಾಧ್ಯಕ್ಷ ಅಹಮ್ಮದ್ ಬಾವಾ ಕೊಟ್ಟಾರ, ಉಸ್ಮಾನ್ ಕಲ್ಲಾಪು, ಅಯ್ಯೂಬ್, ಇಲ್ಯಾಸ್ ಬಸ್ತಿಪಡ್ಪು, ಕೋಟೆಪುರ ಜುಮಾ ಮಸೀದಿಯ ಯು.ಎಂ.ಅಶ್ರಫ್, ಕೋಟೆಪುರ ಮಸೀದಿಯ ಅನ್ವರ್, ಮೇಲಂಗಡಿ ಮಸೀದಿಯ ನಝೀರ್ ಬಾರ್ಲಿ ಉಪಸ್ಥಿತರಿದ್ದರು. ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆಲಂಗಡಿ ಮದ್ರಸದ ಸದರ್ ಉಸ್ತಾದ್ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು