ಹಳೆಯಂಗಡಿ: ಸಾಧಕರಿಗೆ ಸನ್ಮಾನ
ಹಳೆಯಂಗಡಿ, ಜ.4: ತೋಕೂರು ಫೇಮಸ್ ಯೂತ್ ಕ್ಲಬ್‌ನ 28ನೆ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವು ಕ್ಲಬ್‌ನ ವಠಾರದಲ್ಲಿ ನಡೆಯಿತು.
2014-15ನೆ ಸಾಲಿನ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಗುತ್ತಕಾಡು ನಿವಾಸಿ ಅಬೂಬಕರ್ ಸಿದ್ದೀಕ್, ಸುರತ್ಕಲ್ ಉತ್ತರ ವಲಯ ಟ್ರಾಫಿಕ್ ವೃತ್ತ ನಿರೀಕ್ಷಕ ಮಂಜುನಾಥ, ಪಡುಪಣಂಬೂರು ಗ್ರಾಪಂ ಅಧ್ಯಕ್ಷ ಮೋಹನ್ ದಾಸ್‌ರನ್ನು ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶ್ರಾವ್ಯಾ ಭಂಡಾರಿ, ಶ್ರೇಯಾ, ಸೃಜನ್‌ರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭುವನಾಭಿರಾಮ ಉಡುಪು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸುರತ್ಕಲ್ ಉತ್ತರ ವಲಯ ಟ್ರಾಫಿಕ್‌ನ ವೃತ್ತ ನಿರೀಕ್ಷಕ ಮಂಜುನಾಥ ಉದ್ಘಾಟಿಸಿದರು. ಪಡು ಪಣಂಬೂರು ಗ್ರಾಪಂ ಸದಸ್ಯರಾದ ದಿನೇಶ್ ಕುಲಾಲ್, ಹೇಮಂತ್ ಎಸ್. ಅಮೀನ್, ಕ್ಲಬ್‌ನ ಗೌರವಾಧ್ಯಕ್ಷ ಗುರುರಾಜ್ ಎಸ್. ಪೂಜಾರಿ, ಅಧ್ಯಕ್ಷ ಪ್ರಮೋದ್ ಕುಮಾರ್, ಕಾರ್ಯದರ್ಶಿ ನವೀನ್ ಚಂದ್ರ ಉಪಸ್ಥಿತರಿದ್ದರು.