ಕಾರು ಪಲ್ಟಿ: ಮೂವರಿಗೆ ಗಾಯ
Update: 2016-01-04 23:54 IST
ಸುಳ್ಯ, ಜ.4: ಚೊಕ್ಕಾಡಿಯಿಂದ ಕುಕ್ಕುಜಡ್ಕಕ್ಕೆ ತೆರಳುತ್ತಿದ್ದ ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ತೋಟಕ್ಕೆ ಉರುಳಿದ ಘಟನೆ ರವಿವಾರ ರಾತ್ರಿ ಚೊಕ್ಕಾಡಿ ಸಮೀಪ ನಡೆದಿದೆ.
ಕಲ್ಮಡ್ಕದ ಮಾಲಪ್ಪಮಕ್ಕಿ ಮಹಾಬಲ ಎಂಬವರು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಚೊಕ್ಕಾಡಿ ಬಳಿ ನಿಯಂತ್ರಣ ತಪ್ಪಿರಸ್ತೆ ಬದಿಯ ತೋಟಕ್ಕೆ ಬಿದ್ದಿದೆ. ಪರಿಣಾಮ ಮಹಾಬಲರಿಗೆ ಹಾಗೂ ಕಾರಿನಲ್ಲಿದ್ದ ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.ುತ್ತೊಂದು ಪ್ರಕರಣದಲ್ಲಿ ಕನಕಮಜಲಿನಿಂದ ಜಾಲ್ಸೂರು ಮಾರ್ಗವಾಗಿ ಕಾಸರಗೋಡಿಗೆ ಹೋಗುತ್ತಿದ್ದ ಸ್ಯಾಂಟ್ರೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದರೆಗೆ ಗುದ್ದಿ ಜಖಂಗೊಂಡ ಘಟನೆ ನಡೆದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಗಾಯಗಳಾಗಿವೆ.