×
Ad

ಪಾರ್ಕಿನಲ್ಲಿ ಮಲಗಿದ್ದಲ್ಲಿಯೇ ಮೃತ್ಯು

Update: 2016-01-04 23:58 IST

ಉಡುಪಿ, ಜ.4: ಅಜ್ಜರಕಾಡು ಭುಜಂಗ ಪಾರ್ಕಿನ ಕಲ್ಲು ಬೆಂಚಿನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಜ್ವರ ಉಲ್ಬಣಗೊಂಡು ಅಥವಾ ಹೃದಯಘಾತದಿಂದ ಮಲಗಿದ ಸ್ಧಿತಿಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತನನ್ನು ಪಾಂಗಾಳ ಸರಸ್ವತಿ ಕಾಲೋನಿಯ ರಾಜು(26) ಎಂದು ಗುರುತಿಸಲಾಗಿದೆ. ಜ.3ರಂದು ಬೆಳಗ್ಗೆ ಉಡುಪಿಗೆ ಹೋಗುವುದಾಗಿ ಹೇಳಿ ಹೋದ ರಾಜು ರಾತ್ರಿಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಇವರ ಮೃತದೇಹ ಪಾರ್ಕಿನ ಕಲ್ಲುಬೆಂಚಿನ ಮೇಲೆ ಕವಚಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News