×
Ad

ಕುಡಿಯುವ ನೀರು ಕಾಮಗಾರಿಯ 12.72 ಕೋ.ರೂ. ಬಿಲ್ ಬಾಕಿ, ಗುತ್ತಿಗೆದಾರರಿಂದ ಪ್ರತಿಭಟನೆಯ ಎಚ್ಚರಿಕೆ

Update: 2016-01-04 23:59 IST

ಉಡುಪಿ, ಜ.4: ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 2015ನೆ ಸಾಲಿನಲ್ಲಿ ನಡೆಸಿದ ವಿವಿಧ ಕಾಮಗಾರಿಗಳ ಸುಮಾರು 12.72 ಕೋಟಿ ರೂ. ಬಿಲ್‌ಗಳು ಪಾವತಿಗೆ ಬಾಕಿ ಇದ್ದು, ಇವುಗಳನ್ನು ಕೂಡಲೇ ಪಾವತಿಸುವಂತೆ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘ ಸಂಬಂಧಿತ ಇಲಾಖೆ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ನಾಯಕ್ ಪಟ್ಲ, ಬ್ಯಾಂಕಿನಲ್ಲಿ 4.16 ಕೋಟಿ ರೂ. ಬಿಲ್‌ಗಳು ಪಾವತಿಗೆ ಬಾಕಿ ಉಳಿದಿವೆ. ವಿಭಾಗ ಕಚೇರಿಯಲ್ಲಿ 7.39 ಕೋಟಿ ರೂ.ರೂ. ಬಿಲ್ ಪಾವತಿಗೆ ಬಾಕಿ ಇದ್ದರೆ, ಉಪವಿಭಾಗದಲ್ಲಿ ಬಾಕಿ ಇರುವ ಬಿಲ್‌ಗಳ ಒಟ್ಟು ಮೊತ್ತ 1.16 ಕೋಟಿ ರೂ.ಗಳಾಗಿದ್ದು, ಇದರಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಕೈಗೊಳ್ಳಲಾದ 442 ಕಾಮಗಾರಿಗಳಿಗೆ ಒಟ್ಟು 12.72 ಕೋಟಿ ರೂ. ಮೊತ್ತದ ಬಿಲ್ ಬಾಕಿ ಉಳಿದಿದೆ ಎಂದು ದೂರಿದರು.ಲ್ಲೆಯಲ್ಲಿ ಒಟ್ಟು 150ಕ್ಕೂ ಅಧಿಕ ಗುತ್ತಿಗೆದಾರರು ಈ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ. ಇವರಲ್ಲಿ ಅಧಿಕ ಮಂದಿ ಸಣ್ಣ ಗುತ್ತಿಗೆದಾರರು. ಇವರು ತಮ್ಮಲ್ಲಿರುವ ಆರ್ಥಿಕ ಸಂಪನ್ಮೂಲಕ್ಕೆ ಸರಿಯಾಗಿ ಗ್ರಾಮೀಣಾಭಿವೃದ್ಧಿ ನೀರು ಸರಬರಾಜು ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಮಾಡಿ ಗ್ರಾಪಂಗಳಿಗೆ ಹಸ್ತಾಂತರಿಸಿದ್ದಾರೆ. ಇನ್ನೂ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಣ್ಣಯ್ಯ ನಾಯಕ್ ನುಡಿದರು.ದೀಗ ಅನೇಕ ಗುತ್ತಿಗೆದಾರರು ಆರ್ಥಿಕ ಮುಗ್ಗಟ್ಟಿನಿಂದ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಜಿಲ್ಲೆಯ ಗುತ್ತಿಗೆದಾರರು ಕೂಡಾ ರಾಜ್ಯದ ರೈತರಂತೆ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆಗೆ ಶರಣಾಗುವ ದಿನ ದೂರವಿಲ್ಲ ಎಂದ ಹೇಳಿದರು.ುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ 15 ದಿನಗಳ ಕಾಲಾವಕಾಶ ನೀಡುತ್ತೇವೆ. ಇಲ್ಲದಿದ್ದರೆ ಜ.15ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಗುತ್ತಿಗೆದಾರರು ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅಣ್ಣಯ ನಾಯಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ಎಸ್.ರತ್ನಾಕರ ಶೆಟ್ಟಿ, ಮಂಜುನಾಥ ನಾಯಕ್, ಹರೀಶ್, ಪರಮೇಶ್ವರ ಉಪ್ಪೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News