×
Ad

ಕೇಂದ್ರದ ದೌರ್ಬಲ್ಯ ತೆರೆದಿಟ್ಟ ಪಠಾಣ್‌ಕೋಟ್ ದಾಳಿ: ಚಾಂಡಿ

Update: 2016-01-05 00:07 IST

ಕೇರಳ ಜನರಕ್ಷಾ ಯಾತ್ರೆಗೆ ಚಾಲನೆ 
 ಕಾಸರಗೋಡು, ಜ.4: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ದುರ್ಬಲ ಎಂಬುದು ಪಠಾಣ್‌ಕೋಟ್‌ನಲ್ಲಿ ನಡೆದ ಉಗ್ರರ ದಾಳಿ ಎತ್ತಿ ತೋರಿಸುತ್ತಿದೆ. ಕೇವಲ ವಿದೇಶ ಸುತ್ತುವುದರಿಂದ ಶಾಂತಿ ಕಾಪಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ.
ಸೋಮವಾರ ಸಂಜೆ ಕುಂಬಳೆಯಲ್ಲಿ ಕೆಪಿಸಿಸಿ ಅಧ್ಯಕ್ಷ ವಿ.ಎಂ.ಸುಧೀರನ್ ನೇತೃತ್ವದ ಕೇರಳ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾ ಡುತ್ತಿದ್ದರು.
ಕೇಂದ್ರ ಸರಕಾರವು ದೇಶದಲ್ಲಿ ಬದುಕುವ ಸ್ವಾತಂತ್ರವನ್ನು ಕಸಿಯುತ್ತಿದ್ದು, ನೆಮ್ಮದಿಯಿಂದ ಬದುಕುವ ಸ್ಥಿತಿ ದೂರವಾಗುತ್ತಿದೆ ಎಂದು ಹೇಳಿದರು.
ಸಾಕಷ್ಟು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಕಾಂಗ್ರೆಸ್ ಸೋತಾಗ ಚಪ್ಪಾಳೆ ತಟ್ಟಿದವರು ಈಗ ನಿರಾಶರಾಗಿದ್ದಾರೆ. ಯುಪಿಎ ಸರಕಾರ ಅಧಿಕಾರ ದಲ್ಲಿದ್ದಾಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾ ದರೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದಾಗ ಮನಬಂದಂತೆ ಬೆಲೆ ಏರಿಕೆ ಮಾಡುತ್ತಿದ್ದು, ಜನರನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಮತ್ತು ಬಿಜೆಪಿ ಹಿಂಸಾತ್ಮಕ ರಾಜಕೀಯ ದಿಂದ ದೂರವಾಗಬೇಕು. ಕೇರಳದಲ್ಲಿ ನಡೆಯುತ್ತಿ ರುವ ರಾಜಕೀಯ ಹಿಂಸೆ ತಡೆಗೆ ಸಂಘ ಪರಿವಾರದ ಮುಖಂಡರ ಜೊತೆಗೆ ಚರ್ಚೆಗೆ ಸಿದ್ಧ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಪಿಣರಾಯಿ ವಿಜಯನ್ ನೀಡಿರುವ ಹೇಳಿಕೆ ಸಾಕಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಇದು ಮತ ಪಡೆಯುವ ಉದ್ದೇಶವಾಗಿದ್ದರೆ ಜನತೆ ಸಿಪಿಎಂನ್ನು ಕೇರಳದಿಂದ ಹೊರದಬ್ಬಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು ರಾಜ್ಯ ಗೃಹಸಚಿವ ರಮೇಶ್ ಚೆನ್ನಿತ್ತಲ ಸಮಾರಂ ಭದ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್, ಕೇರಳ ಕ್ರೀಡಾಸಚಿವ ತಿರುವಂಜೂರು ರಾಧಾಕೃಷ್ಣನ್, ಎ.ಪಿ.ಅನಿಲ್ಕುಮಾರ್, ವಿ.ಎಸ್.ಶಿವಕುಮಾರ್, ಸಂಸದ ಕೆ.ಸಿ. ವೇಣುಗೋಪಾಲ್, ಕೆ.ಸಿ.ಜೋಸೆಫ್, ಕೆ. ಬಾಬು, ಕರ್ನಾಟಕ ಅರಣ್ಯ ಸಚಿವ ಬಿ. ರಮಾನಾಥ ರೈ, ಶಾಸಕ ವಿ.ಡಿ.ಸತೀಶನ್, ಪಿ.ಸಿ.ವಿಷ್ಣುನಾಥ್, ಕೆಪಿಸಿಸಿ ಉಪಾಧ್ಯಕ್ಷ ಎಂ. ಎಂ.ಹಸನ್, ಟಿ.ಸಿದ್ದೀಕ್, ಸತೀಶನ್ ಪಾಚೇನಿ, ಕೆ.ಪಿ. ಕುಂಞಿಕಣ್ಣನ್, ಗಂಗಾಧರನ್ ನಾಯರ್, ಕೇಶವಪ್ರಸಾದ್ ನಾಣಿತ್ತಿಲು, ತಂಬಾನೂರ್ ರವಿ, ಪಾಲೋಡ್ ರವಿ, ಹರ್ಷಾದ್ ವರ್ಕಾಡಿ, ಪಿ.ಪಿ.ತಂಗಚ್ಚನ್, ಲಾಲಿ ವಿನ್ಸೆಂಟ್, ಪಿ.ಸಿ. ಚಾಕೊ, ಶಾಸಕ ಪಿ.ಬಿ.ಅಬ್ದುರ್ರಝಾಕ್, ಸಂಸದರಾದ ಎಂ.ಕೆ.ರಾಘವನ್, ಆಂಟೋ ಆ್ಯಂಟನಿ, ಧನಪಾಲನ್, ಶರತ್‌ಚಂದ್ರ ಪ್ರಸಾದ್, ರಾಜ್‌ಮೋಹನ್‌ಉಣ್ಣಿತ್ತಾನ್, ಪಿ.ರಾಮಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.
  ರಾಜ್ಯದ 140 ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗುವ ಈ ಯಾತ್ರೆ ಫೆಬ್ರವರಿ 9ರಂದು ತಿರುವನಂತಪುರದಲ್ಲಿ ಸಮಾಪನಗೊಳ್ಳಲಿದೆ. ಸಮಾ ರೋಪ ಸಮಾರಂಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News