×
Ad

ಜೂನ್‌ನೊಳಗೆ ಮೀನುಗಾರರಿಗೆಬಯೋಮೆಟ್ರಿಕ್ ಕಾರ್ಡ್: ಅಶೋಕ್‌ಕುಮಾರ್

Update: 2016-01-05 00:09 IST

ಮೀನುಗಾರಿಕೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳ ಅಳವಡಿಕೆ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರ
ಮಂಗಳೂರು, ಜ.4: ಆಳ ಸಮುದ್ರ ದಲ್ಲಿ ಮೀನುಗಾರಿಕೆಯಲ್ಲಿ ತೊಡಗಿ ಕೊಂಡಿರುವ ಮೀನುಗಾರರ ಭದ್ರತೆ ಹಾಗೂ ಸರಕಾರದಿಂದ ದೊರಕುವ ವಿವಿಧ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ನೀಡಲಾಗುವ ಬಯೋ ಮೆಟ್ರಿಕ್ ಕಾರ್ಡ್‌ಗಳ ವಿತರಣೆ ಕಾರ್ಯವನ್ನು ಜೂನ್‌ನೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಅಶೋಕ್‌ಕುಮಾರ್ ಅಂಗುರಾನ ತಿಳಿಸಿದ್ದಾರೆ. ನಗರದ ಹೊಟೇಲೊಂದರಲ್ಲಿ ಇಂದು ‘ಮೀನುಗಾರಿಕೆಯಲ್ಲಿ ಬಾಹ್ಯಾ ಕಾಶ ತಂತ್ರಜ್ಞಾನಗಳ ಅಳವಡಿಕೆ’ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣ ನೀಡಿದ ಅವರು ಈ ವಿಷಯ ತಿಳಿಸಿದರು. ದೇಶದಲ್ಲಿ 1.4 ಕೋಟಿ ಮಂದಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂ ಡಿದ್ದು, ಆಳ ಸಮುದ್ರದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಮೀನುಗಾರಿಕೆ ನಡೆ ಸುವ ಸುಮಾರು 20 ಲಕ್ಷ ಮೀನು ಗಾರರಿಗೆ 2009ರಿಂದ ಬಯೋ ಮೆಟ್ರಿಕ್ ಕಾರ್ಡ್‌ಗಳನ್ನು ನೀಡುವ ಕಾರ್ಯ ನಡೆಯುತ್ತಿದೆ. ಈಗಾ ಗಲೇ 13.70 ಲಕ್ಷದಷ್ಟು ಮೀನು ಗಾರರಿಗೆ ಬಯೋ ಮೆಟ್ರಿಕ್ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಇನ್ನುಳಿದಿ ರುವ ಸುಮಾರು 6 ಲಕ್ಷದಷ್ಟು ಮೀನುಗಾರರಿಗೆ ಪ್ರಸಕ್ತ ಸಾಲಿನ ಮೀನುಗಾರಿಕಾ ನಿಷೇಧದ ಅವಧಿಯೊ ಳಗೆ ಈ ಕಾರ್ಡ್‌ಗಳನ್ನು ವಿತರಿಸಲಾ ಗುವುದು ಎಂದವರು ಹೇಳಿದರು. ಮೀನುಗಾರಿಕೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅಳವಡಿಕೆ ಮೀನುಗಾರಿಕಾ ವಲಯಕ್ಕೆ ಬಹಳ ಉಪಯುಕ್ತ ಎಂದ ಅವರು, ಇದರಿಂದ ವಿಶೇಷ ವಾಗಿ ಸಮುದ್ರದಲ್ಲಿ ಮೀನುಗಾರಿಕೆ ಸಾಮರ್ಥ್ಯ ವಲಯಗಳನ್ನು ಗುರುತಿಸುವುದು, ಮೀನುಗಾರರಿಗೆ ನಿಖರವಾದ ಹವಾಮಾನ ಮುನ್ಸೂ ಚನೆ ಹಾಗೂ ಮೀನು ಕೃಷಿಗೆ ಜಲ ಸಂಪನ್ಮೂಲಗಳ ಪ್ರದೇಶ ವನ್ನು ಮಾಪನ ಮಾಡಲು ಸಹಕಾರಿಯಾಗಲಿದೆ. ಮಾತ್ರವಲ್ಲದೆ, ಮೀನುಗಾರರಿಗೆ ನೀಡಲಾಗುವ ಬಯೋ ಮೆಟ್ರಿಕ್ ಕಾರ್ಡ್‌ನಲ್ಲಿ ಮೀನುಗಾ ರರ ಸಂಪೂರ್ಣ ವಿವರ ಹಾಗೂ ದೂರವಾಣಿ ಸಂಖ್ಯೆಯೂ ಲಭ್ಯವಿ ರುವುದರಿಂದ ಇಲಾಖೆಯು ಹವಾ ಮಾನ ಮುನ್ಸೂಚನೆ ಹಾಗೂ ಅಗತ್ಯ ಮಾಹಿತಿಗಳನ್ನು ನೇರವಾಗಿ ಮೀನುಗಾರರಿಗೆ ಒದಗಿಸಲು ಸಾಧ್ಯವಾಗಲಿದೆ. ಈ ತಂತ್ರಜ್ಞಾನಗಳ ಅಳವಡಿಕೆಯು ಮೀನುಗಾರಿಕೆ ದೋಣಿಗಳ ಕಾರ್ಯಾಚರಣೆ ವೆಚ್ಚವನ್ನು ಕಡಿಮೆಗೊಳಿಸಲಿದೆ ಹಾಗೂ ಮೀನುಗಾರರು ಹೆಚ್ಚಿನ ಲಾಭವನ್ನೂ ಪಡೆಯಲು ಸಾಧ್ಯವಿದೆ. ಇದಕ್ಕಾಗಿ ದೇಶದ 9 ಕರಾವಳಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 166 ಮೇಲ್ವಿಚಾರಣಾ ಕೇಂದ್ರಗಳನ್ನು ಆರಂಭಿಸಲಾಗುವುದು. ಬಾಹ್ಯಾಕಾಶ ತಂತ್ರಜ್ಞಾನ ಮೀನು ಗಾರರಿಗೆ ಉಪಯುಕ್ತವಾಗುವಂತೆ ಮೀನುಗಾರಿಕಾ ವಲಯಕ್ಕೆ ಅಳವಡಿ ಸಲು ಕ್ರಿಯಾ ಯೋಜನೆಯನ್ನೂ ರೂಪಿ ಸಲಾಗುವುದು ಎಂದು ಅಶೋಕ್ ಕುಮಾರ್ ವಿವರಿಸಿದರು. ಬಾಹ್ಯಾಕಾಶ ತಂತ್ರಜ್ಞಾನವನ್ನು ಮೀನುಗಾರಿಕೆಗೆ ಬಳಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ದೇಶದಲ್ಲಿ ಇದೇ ಪ್ರಥಮ ಬಾರಿಗೆ ಕರ್ನಾಟಕದ ಮಂಗಳೂರಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾ ಗಿದೆ ಎಂದವರು ತಿಳಿಸಿದರು. ರಾಜ್ಯ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯ ದರ್ಶಿ ಡಾ. ಎನ್.ಎಸ್.ಚನ್ನಪ್ಪ ಗೌಡ ಸ್ವಾಗತಿಸಿದರು. ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಹಾಗೂ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿ ಆದಿತ್ಯಕುಮಾರ್ ಜೋಶಿ ವಂದಿಸಿದರು. ವೇದಿಕೆಯಲ್ಲಿ ಎಚ್.ಎಸ್.ವೀರಪ್ಪ ಗೌಡ, ಹಿರಿಯಣ್ಣ ಉಪಸ್ಥಿತರಿದ್ದರು. ಕೃಪಾ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.
ಹೆಚ್ಚಿನ ಅನುದಾನಕ್ಕೆ ಕೇಂದ್ರಕ್ಕೆ ಸಚಿವ ಜೈನ್ ಆಗ್ರಹ
ಕಾರ್ಯಾಗಾರವನ್ನು ಉದ್ಘಾಟಿಸಿದ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ರಾಜ್ಯದ ಮೀನುಗಾರಿಕಾ ಬಂದರುಗಳ ಆಧುನೀಕರಣ ಹಾಗೂ ಬ್ರೇಕ್ ವಾಟರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರಕಾರವು ಹೆಚ್ಚಿನ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News