ರಾಜ್ಯದಲ್ಲಿ 5 ಕಡೆ ಸಂಚಾರಿ ಮೀನುಗಾರಿಕಾ ಕ್ಯಾಂಟೀನ್, ಔಟ್‌ಲೆಟ್: ಡಾ.ಚನ್ನಪ್ಪ ಗೌಡ
ಪ್ರಾಯೋಗಿಕವಾಗಿ ಮಂಗಳೂರು, ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ- ಧಾರವಾಡಗಳಲ್ಲಿ ಪ್ರಾರಂಭ
ಮಂಗಳೂರು, ಜ.4: ಕರ್ನಾಟಕ ರಾಜ್ಯ ಮೀನು ಗಾರಿಕಾ ಅಭಿವೃದ್ಧಿ ನಿಗಮ(ಕೆಎಫ್‌ಡಿಸಿ)ದ ವತಿ ಯಿಂದ ರಾಜ್ಯದ ಐದು ಕಡೆಗಳಲ್ಲಿ ಮೀನುಗಾರಿಕಾ ಸಂಚಾರಿ ಕ್ಯಾಂಟೀನ್ ಮತ್ತು ಸಂಚಾರಿ ಮಾರಾಟ ಔಟ್‌ಲೆಟ್‌ಗಳನ್ನು ಆರಂಭಿಸಲು ನಿರ್ಧರಿ ಸಲಾಗಿದೆ ಎಂದು ರಾಜ್ಯ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಎಸ್.ಚನ್ನಪ್ಪ ಗೌಡ ಹೇಳಿ ದ್ದಾರೆ.
ನಗರದಲ್ಲಿ ಇಂದು ಮೀನುಗಾರಿಕೆ ಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳ ಅಳವಡಿಕೆ ಕುರಿತ ರಾಷ್ಟ್ರ ಮಟ್ಟದ ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಪ್ರಾಯೋಗಿಕವಾಗಿ ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ- ಧಾರವಾಡಗಳಲ್ಲಿ ಈ ಸಂಚಾರಿ ಮೀನು ಕ್ಯಾಂಟೀನ್ ಹಾಗೂ ಮೀನು ಮಾರಾಟ ಔಟ್‌ಲೆಟ್‌ಗಳು ಆರಂಭಗೊಳ್ಳಲಿವೆ ಎಂದು ಅವರು ತಿಳಿಸಿದರು. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಎಫ್‌ಡಿಬಿ)ಯ ಅನುದಾನದಲ್ಲಿ ಕೆಎಫ್‌ಡಿಸಿಯು ಉಡುಪಿಯ ತೆಕ್ಕಟ್ಟೆ, ಕೊಡಗಿನ ವಿರಾಜಪೇಟೆ ಮತ್ತು ದಾವಣಗೆರೆಗಳಲ್ಲಿ ಬೃಹತ್ ಮೀನು ಮಾರುಕಟ್ಟೆಗಳನ್ನು ಆಧುನೀಕರಣಗೊಳಿಸಲಿದೆ. ತೆಕ್ಕಟ್ಟೆಯಲ್ಲಿ ಕಾಮಗಾರಿ ಈಗಾ ಗಲೇ ಆರಂಭಗೊಂಡಿದ್ದು, ವಿರಾಜ ಪೇಟೆಯ ಮೀನು ಮಾರು ಕಟ್ಟೆೆಗೆ ಜ.8ರಂದು ಶಿಲಾನ್ಯಾಸ ನೆರವೇರಲಿದೆ. ಸುಮಾರು 1 ಕೋ.ರೂ. ವೆಚ್ಚದಲ್ಲಿ ಮೀನು ಮಾರುಕಟ್ಟೆಗಳು ಆಧುನೀಕರಣಗೊಳ್ಳಲಿವೆ. ಈ ಮಾರುಕಟ್ಟೆಯಲ್ಲಿ ಸುಮಾರು 40ರಿಂದ 50ರಷ್ಟು ಮೀನು ಗಾರ ಮಹಿಳೆಯರು ಮೀನು ವ್ಯಾಪಾರ ಮಾಡಲು ಸಾಧ್ಯವಾಗಲಿದೆ ಎಂದವರು ವಿವರಿಸಿದರು.
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕೆಎಫ್‌ಡಿಸಿಯ ಮೀನುಗಾರಿಕಾ ಕ್ಯಾಂಟೀನನ್ನು ಒಂದು ಕೋ.ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದಲ್ಲಿ 10 ಕ್ಯಾಂಟೀನ್- ಔಟ್‌ಲೆಟ್
ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಮೀನು ಗಾರಿಕಾ ಅಭಿವೃದ್ಧಿ ನಿಗಮದಡಿ 17 ಮೀನುಗಾರಿಕಾ ಕ್ಯಾಂಟೀನ್‌ಗಳು ಕಾರ್ಯಾಚರಿಸುತ್ತಿದ್ದು, ಇದೀಗ ಉತ್ತರ ಕರ್ನಾಟಕದಲ್ಲಿ 10 ಕ್ಯಾಂಟೀನ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕದ ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿ ಮತ್ತು ಗದಗಗಳಲ್ಲಿ ಈ ಸುಸಜ್ಜಿತ ಕ್ಯಾಂಟೀನ್‌ಗಳು ಆರಂಭಗೊಳ್ಳಲಿವೆ. ಮಾತ್ರವಲ್ಲದೆ ರಾಜ್ಯದಲ್ಲಿ 20 ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲಾಗುವುದು.
-ಡಾ.ಎನ್.ಎಸ್.ಚನ್ನಪ್ಪ ಗೌಡ