×
Ad

ಇಂದಿನ ಕಾರ್ಯಕ್ರಮ

Update: 2016-01-05 00:10 IST

*ಪೇಜಾವರ ಪರ್ಯಾಯ: ಉಡುಪಿ ನಗರಸಭೆಯ ಆರು ವಾರ್ಡ್‌ಗಳಿಂದ ಹಿರಿಯಣ್ಣ ಕಿದಿಯೂರು, ಯಶ್ಪಾಲ್ ಸುವರ್ಣರ ನೇತೃತ್ವ ದಲ್ಲಿ ಮಲ್ಪೆ ಕಡಲತೀರದಿಂದ ಹೊರೆಕಾಣಿಕೆ. ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಸಂಜೆ 5:30ರಿಂದ ಛತ್ತೀಸ್‌ಗಡದ ಫೈಝ್‌ಖಾನ್ ಮತ್ತು ತಂಡದಿಂದ ಗೋ ಕಥಾ ಗಾಯನ, ರಾತ್ರಿ 7ರಿಂದ ಶ್ರೀಅಧೋಕ್ಷಜ ಮಂಟಪದಲ್ಲಿ ತೋನ್ಸೆ ಪುಷ್ಕಳಕುಮಾರ್ ಮತ್ತು ಬಳಗದಿಂದ ಭಾವ-ಭಕ್ತಿ ಸಂಗೀತ.

*ಜಿಲ್ಲಾ ನಾಟಕೋತ್ಸವ:

ಕರ್ನಾಟಕ ನಾಟಕ ಅಕಾಡಮಿ, ಸುವರ್ಣ ಸಂಭ್ರಮದಲ್ಲಿರುವ ರಂಗಭೂಮಿ ಉಡುಪಿ ಸಹಯೋಗದೊಂದಿಗೆ ಉಡುಪಿ ಪರ್ಯಾಯೋತ್ಸವದ ಸಂದರ್ಭ ಆಯೋಜಿಸಿರುವ ಉಡುಪಿ ಜಿಲ್ಲಾ ನಾಟಕೋತ್ಸವದಲ್ಲಿ ರಂಗಭೂಮಿ ಕಲಾವಿದರಿಗೆ ಸನ್ಮಾನ ಹಾಗೂ ಲಾವಣ್ಯ ಬೈಂದೂರು ತಂಡದಿಂದ ನಾಟಕ ‘ಮುದ್ದಣನ ಪ್ರಮೋಷನ್ ಪ್ರಸಂಗ’. ನಿರ್ದೇಶನ ಗಿರೀಶ್ ಬೈಂದೂರು. ಸಮಯ: ಸಂಜೆ 6:15ರಿಂದ.ಸ್ಥಳ: ಎಂಜಿಎಂ ಕಾಲೇಜಿನ ಮುದ್ದಣ ಮಂಟಪ, ಉಡುಪಿ. *ಸಂವಾದ: 

ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಅಧಿಕಾರಿಗಳೊಂದಿಗೆ ವರ್ತಕರ ಸಂವಾದ. ಉದ್ಘಾಟನೆ ಎಸ್ಪಿ ಕೆ.ಅಣ್ಣಾಮಲೈ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ: ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್ ಸಭಾಂಗಣ, ಉಡುಪಿ. *ಈಜು ಸ್ಪರ್ಧೆ: ಕರ್ನಾಟಕ ಈಜು ಸಂಸ್ಥೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ 16ನೆ ರಾಜ್ಯ ಈಜು ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ಸ್ಪರ್ಧೆಗಳು. ಸಮಯ: ಬೆಳಗ್ಗೆ 9ರಿಂದ. ಸ್ಥಳ: ಅಜ್ಜರಕಾಡು ಈಜು ಕೊಳ ಉಡುಪಿ.

*ಕ್ರೀಡಾಕೂಟ: ಉಡುಪಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದಲ್ಲಿ ಸ್ಪರ್ಧೆಗಳು. ಸಮಯ: ಬೆಳಗ್ಗೆ 9ರಿಂದ. ಸ್ಥಳ: ಎಂಐಟಿ ಕ್ರೀಡಾಂಗಣ, ಮಣಿಪಾಲ.

*ಕೃಷ್ಣ ಮಠ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರ ಶಾಲೆ ಪುರಾಣ ವಿದ್ವಾನ್ ಮಧ್ವೇಶ ಆಚಾರ್ಯರಿಂದ ಪ್ರವಚನ. 7:30ರಿಂದ ರಾಜಾಂಗಣದಲ್ಲಿ ಪರ್ಯಾಯ ಅವಧಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮಂಗಳ ಮಹೋತ್ಸವದ ಅಂಗವಾಗಿ ಉಡುಪಿಯ ಯಕ್ಷ ಸಂಗೀತ ನಾದ ನಾಟ್ಯ ವೈಭವಂ ಇವರಿಂದ ಖ್ಯಾತ ಭಾಗವತ ನಾರಾಯಣ ಶಬರಾಯರ ನಿರ್ದೇಶನದಲ್ಲಿ ಗೋಪಿಕೋನ್ಮಾದ ಯಕ್ಷಗಾನ ಬ್ಯಾಲೆ, 7:15ಕ್ಕೆ ಸುವರ್ಣ ಪಾಲಕಿ ಉತ್ಸವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News