×
Ad

ಜ.9-10: ಮಂಗಳೂರು ತಾಲೂಕು ಯುವಜನ ಮೇಳ

Update: 2016-01-05 00:11 IST

ಮಂಗಳೂರು, ಜ.4: ತಾಲೂಕು ಮಟ್ಟದ ಯುವಜನ ಮೇಳ ಸಾಂಸ್ಕೃತಿಕ ಸ್ಪರ್ಧೆ ಶಿಬರೂರು ದೇಲಂತಬೆಟ್ಟು ಯುವಕ ಮಂಡಲದ ಪದ್ಮಾವತಿ ಕಲಾಮಂದಿರದಲ್ಲಿ ಜ.9, 10ರಂದು ನಡೆಯಲಿದೆ ಎಂದು ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
 ಜ.9ರಂದು ಅಪರಾಹ್ನ 3 ಗಂಟೆಗೆ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸುವರು ಹಾಗೂ ತಾಪಂ ಅಧ್ಯಕ್ಷೆ ರಜನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜ.10ರಂದು ಸಂಜೆ 4ಕ್ಕೆ ಸಂಸದ ನಳಿನ್‌ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News