×
Ad

ಜ.7: ಕಮ್ಮಾಡಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ

Update: 2016-01-05 00:15 IST

ಪುತ್ತೂರು, ಜ.4: ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ, ಉದ್ಯಮಿ ಹಾಜಿ ಇಬ್ರಾಹೀಂ ಕಮ್ಮಾಡಿ ನೇತೃತ್ವದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಸಂಪ್ಯದ ಕಮ್ಮಾಡಿ ಮೈದಾನದಲ್ಲಿ ಸುಸಜ್ಜಿತ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳಲಿದ್ದು, ಜ.7ರಂದು ಶಿಲಾನ್ಯಾಸ ಕಾರ್ಯಕ್ರಮ ನೆವೇರಲಿದೆ ಎಂದು ಕಮ್ಮಾಡಿ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

 ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್, ಮಿತ್ತಬೈಲ್ ಜಬ್ಬಾರ್ ಮುಸ್ಲಿಯಾರ್ ಮತ್ತಿತರ ಧಾರ್ಮಿಕ ವಿದ್ವಾಂಸರು ಆಶೀರ್ವಚನ ನೀಡಲಿದ್ದಾರೆ. ಅರಣ್ಯ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಶಿಲಾನ್ಯಾಸ ನಿರ್ವ ಹಿಸಲಿದ್ದಾರೆ ಎಂದರು. ಕಮ್ಮಾಡಿ ಮೈದಾನದ ಬಳಿ ಒಂದು ಎಕರೆ ಜಾಗದಲ್ಲಿ ರೂ.10 ಕೋಟಿಗೂ ಮಿಕ್ಕಿದ ವೆಚ್ಚದಲ್ಲಿ 25 ಸಾವಿರ ಚದರ ಅಡಿ ವಿಸ್ತೀರ್ಣದ 4 ಅಂತಸ್ತಿನ ಸುಮಾರು 75 ಹಾಸಿಗೆಗಳ ಸೌಕರ್ಯವಿರುವ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಈ ಆಸ್ಪತ್ರೆಯು ಸಕಲ ಚಿಕಿತ್ಸಾ ಸೌಕರ್ಯಗಳೊಂ ದಿಗೆ ಖ್ಯಾತ ತಜ್ಞ ವೈದ್ಯರನ್ನು ಒಳಗೊಂಡಿರುತ್ತದೆ. ಸರ್ವಧರ್ಮೀಯ ಬಡ ನಿರ್ಗತಿಕರ ರೋಗಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸುವ ಯೋಜನೆಯನ್ನು ಹೊಂದಿರುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಮ್ಮಾಡಿ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಪ್ರ. ಕಾರ್ಯದರ್ಶಿ ಫಝಲ್ ರಹೀಂ, ಮ್ಯಾನೇಜರ್ ಕೆ.ಆರ್.ಹುಸೈನ್ ದಾರಿಮಿ, ಕಾರ್ಯದರ್ಶಿ ಬಿ.ಎ.ಶಕೂರ್ ಹಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News