ಬಂಟ್ವಾಳ: ಫಲಾನುಭವಿಗಳಿಗೆ ಚೆಕ್ ವಿತರಣೆ
ವಿಟ್ಲ, ಜ.4: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ದೇವರಾಜ ಅರಸು ಹಿಂದು ಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ವತಿಯಿಂದ 2015ನೆ ಸಾಲಿನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಸೋಮವಾರ ಬಿ.ಸಿ.ರೋಡ್‌ನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚೆಕ್‌ಗಳನ್ನು ವಿತರಿಸಿದರು. ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ತಾಪಂ ಸದಸ್ಯ ಮಾಧವ ಎಸ್. ಮಾವೆ, ಪ್ರಮುಖರಾದ ಬಿ.ಎಚ್.ಖಾದರ್, ಅಬ್ಬಾಸ್ ಅಲಿ, ಅಬೂಬಕರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಶ್ರಮ ಶಕ್ತಿ ಯೋಜನೆಯಡಿ 405 ಮಂದಿಗೆ 101.25 ಲಕ್ಷ ರೂ., ಕಿರು ಸಾಲ ಯೋಜನೆಯಡಿ 96 ಫಲಾನುಭವಿಗಳಿಗೆ 9.60 ಲಕ್ಷ ರೂ. ಸಹಿತ ಒಟ್ಟು 110.85 ಲಕ್ಷ ರೂ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಚೈತನ್ಯ ಸ್ವಯಂ ಉದ್ಯೋಗ ಯೋಜನೆಯಡಿ 22 ಫಲಾನುಭವಿಗಳಿಗೆ 6.60 ಲಕ್ಷ ರೂ., ಸಾಂಪ್ರದಾಯಿಕ ಯೋಜನೆಯಡಿ 37 ಮಂದಿಗೆ 12.95 ಲಕ್ಷ ರೂ., ಕಿರು ಸಾಲ ಯೋಜನೆಯಡಿ 10 ಮಂದಿಗೆ 1.50 ಲಕ್ಷ ರೂ. ಸೇರಿದಂತೆ ಒಟ್ಟು 21.05 ಲಕ್ಷ ರೂ. ಮೊತ್ತದ ಚೆಕ್‌ಗಳನ್ನು ಇಂದು ವಿತರಿಸಲಾಯಿತು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ನಿರ್ದೇಶಕ ಸೋಮಪ್ಪಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ನಿರ್ದೇಶಕ ರಾಮಮೂರ್ತಿ ಮಯ್ಯ ಫಲಾನುಭವಿಗಳ ಪಟ್ಟಿ ವಾಚಿಸಿದರು.