×
Ad

ಎನ್‌ಡಬ್ಲುಎಫ್ ರಾಜ್ಯಾಧ್ಯಕ್ಷೆಯಾಗಿ ಫಾತಿಮಾ ಆಯ್ಕೆ

Update: 2016-01-05 00:19 IST

ಪುತ್ತೂರು, ಜ.4: ಎನ್‌ಡಬ್ಲುಎಫ್ ರಾಜ್ಯ ಪ್ರತಿನಿಧಿ ಸಮಾವೇಶವು ಕಬಕ ಸಮೀಪದ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭ 2016-17ರ ಅವಧಿಗೆ ರಾಜ್ಯ ಪದಾಧಿಕಾರಿಗಳ ಚುನಾವಣೆ ನಡೆಸಲಾಯಿತು. ರಾಜ್ಯಾಧ್ಯಕ್ಷೆಯಾಗಿ ಫಾತಿಮಾ ನಸೀಮಾ, ರಾಜ್ಯ ಕಾರ್ಯದರ್ಶಿಯಾಗಿ ಸಯೀದಾ ಯೂಸುಫ್, ಉಪಾಧ್ಯಕ್ಷೆಯಾಗಿ ದಿಲ್ದಾರ್, ಉತ್ತರ ಕನ್ನಡದ ಕಾರ್ಯದರ್ಶಿಗಳಾಗಿ ಶಬನಾ ಬೆಂಗಳೂರು, ಝೀನತ್ ಬಂಟ್ವಾಳ, ಕೋಶಾಧಿಕಾರಿಯಾಗಿ ತಬಸ್ಸುಮ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆಯರಾಗಿ ಝರೀನಾ, ತರನ್ನುಮ್, ಆಯಿಶಾ, ಕುಬ್‌ರಾ, ಶಾಹಿದಾ ತಸ್ನೀಮಾ, ನಝೀಫಾ ಮತ್ತು ಫರ್ಝಾನ ಮಂಗಳೂರು ಆಯ್ಕೆಯಾದರು.

ರಾಜ್ಯ ಕಾರ್ಯದರ್ಶಿ ಲುಬ್ನಾ ಮಿನಾಝ್ ಶೇಖ್ ಕಳೆದ ಸಾಲಿನ ವರದಿ ಮಂಡಿಸಿದರು. ಎನ್‌ಡಬ್ಲುಎಫ್ ರಾಷ್ಟ್ರಾಧ್ಯಕ್ಷೆ ಶಾಹಿದಾ ಎ. ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಫರೀದಾ ಹಸನ್ ಉಪಸ್ಥಿತರಿದ್ದರು.

ಎರಡು ದಿನಗಳ ಈ ಸಮಾವೇಶದಲ್ಲಿ ಮಹಿಳೆಯರ ಕೌಟುಂಬಿಕ, ಸಾಮಾಜಿಕ ಜವಾ ಬ್ದಾರಿಗಳ ವಿಷಯದಲ್ಲಿ ವಿಚಾರಗೋಷ್ಠಿಗಳು ಹಾಗೂ ಉತ್ತಮ ಸಮಾಜ ಮತ್ತು ಸಮುದಾದ ನಿರ್ಮಾಣದಲ್ಲಿ ಮಹಿಳೆಯ ಜವಾಬ್ದಾರಿಗಳ ಬಗ್ಗೆ ಚರ್ಚಾಗೋಷ್ಠಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News