ಉಪ್ಜಳ: .15ರಿಂದ ಜಾಥಾ
Update: 2016-01-05 09:02 IST
ಕಾಸರಗೋಡು : ಸಿಪಿಐ ಎಂ ರಾಜ್ಯ ಸಮಿತಿ ನೇತ್ರತ್ವದಲ್ಲಿ ಪಾಲಿಟ್ ಬ್ಯುರೋ ಸದಸ್ಯ ಪಿಣರಾಯಿ ವಿಜಯನ್ ನೇತ್ರತ್ವದ ನವಕೇರಳ ಜಾಥಾ ಜನವರಿ ೧೫ ರಂದು ಉಪ್ಪಳದಿಂದ ಪ್ರಯಾಣ ಬೆಳೆಸಲಿದೆ .
ಸಂಜೆ ನಾಲ್ಕು ಗಂಟೆಗೆ ಉಪ್ಪಳ ಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಿಪಿಎಂ ಹಿರಿಯ ಮುಖಂಡ ಪ್ರಕಾಶ್ ಕಾರಟ್ ಜಾಥಾ ಕ್ಕೆ ಚಾಲನೆ ನೀಡುವರು .
ಪ್ರತಿಪಕ್ಷ ನಾಯಕ ವಿ .ಎಸ್ ಅಚ್ಯುತಾನಂದನ್, ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಉಪಸ್ಥಿತರಿರುವರು.
ಜಾತ್ಯಾತೀತ, ಭ್ರಷ್ಟಾಚಾರ ಮುಕ್ತ ,ಅಭಿವ್ರದ್ದಿ ಕೇರಳ ಎಂಬ ಘೋಷಣೆಯೊಂದಿಗೆ ಈ ಜಾಥಾ ನಡೆಯಲಿದ್ದು, ಫೆಬ್ರವರಿ ೧೪ ರಂದು ತಿರುವನಂತಪುರ ದಲ್ಲಿ ಜಾಥಾ ಕೊನೆಗೊಳ್ಳಲಿದೆ .
ಎಂ . ವಿ ಗೋವಿಂದನ್ , ಕೆ. ಜೆ ಥೋಮಸ್, ಪಿ. ಕೆ ಸೈನಬಾ , ಎಂ .ಬಿ ರಾಜೇಶ್ , ಪಿ. ಕೆ ಬಿಜು , ಎ . ಸಂಪತ್ , ಕೆ . ಟಿ ಜಲೀಲ್ ಜಾಥಾ ಸದಸ್ಯರಾಗಿದ್ದಾರೆ .