×
Ad

ಮೆಲ್ಕಾರ್: ರಸ್ತೆ ಅಗಲೀಕರಣ ಕಾಮಗಾರಿಗೆ ಸಚಿವ ಬಿ ರಮಾನಾಥ ರೈ ಶಿಲಾನ್ಯಾಸ

Update: 2016-01-05 13:56 IST

ವಿಟ್ಲ : ರಾಜ್ಯ ಸರಕಾರದ ಬಜೆಟ್ ಅನುದಾನದಿಂದ ಮಂಜೂರಾಗಿರುವ 2 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಲ್ಕಾರ್-ಮಾರ್ನಬೈಲು ರಸ್ತೆ ಅಗಲೀಕರಣ ಕಾಮಗಾರಿಗೆ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು. 
ಈ ಸಂದರ್ಭ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮಿನ್ ಹಾಮದ್, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಬಂಟ್ವಾಳ ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಪುರಸಭಾ ಸದಸ್ಯರಾದ ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಜೆಸಿಂತಾ ಡಿ'ಸೋಜ, ಚಂಚಲಾಕ್ಷಿ, ಸದಾಶಿವ ಬಂಗೇರ, ರಾಮಕೃಷ್ಣ ಆಳ್ವ, ಪ್ರವೀಣ್ ಬಿ. ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಜಗದೀಶ್ ಕುಂದರ್, ಮುಹಮ್ಮದ್ ನಂದರಬೆಟ್ಟು, ಗಂಗಾಧರ್, ಪ್ರಭಾ ಆರ್. ಸಾಲಿಯಾನ್, ಪ್ರಮುಖರಾದ ಪದ್ಮನಾಭ ರೈ, ಬಿ.ಕೆ. ಇದ್ದಿನಬ್ಬ ಕಲ್ಲಡ್ಕ, ಹಾಮದ್ ಬಾವ ಯಾಸೀನ್, ಲೋಕೋಪಯೋಗಿ ಇಲಾಖಾ ಇಂಜಿನಿಯರ್‍ಗಳಾದ ಉಮೇಶ್ ಭಟ್, ಅರುಣ್ ಪ್ರಕಾಶ್ ಡಿ'ಸೋಜ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಭಟ್, ಇಂಜಿನಿಯರ್ ಡೊಮೆನಿಕ್ ಡಿ'ಮೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News