ಚೆನ್ನೈ ಶಾಲೆಗಳನ್ನು ಬೆಚ್ಚಿಸಿದ ಹುಸಿ ಬಾಂಬ್ ಬೆದರಿಕೆ ಕರೆ
Update: 2016-01-05 22:42 IST
ಚೆನ್ನೈ, ಜ.5: ಚೆನ್ನೈಯ ಶಾಲೆಯೊಂದಕ್ಕೆ ಮಂಗಳವಾರ ಬಂದಿದ್ದ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಅಲ್ಲಿನ ಸುಮಾರು 11 ಶಾಲೆಗಳು ರಜೆ ಘೋಷಿಸಿದ್ದವು. ಕೇವಳಂನ ಶಾಲೆಯೊಂದಕ್ಕೆ ಕರೆ ಮಾಡಿದ್ದ ಅಜ್ಞಾತ ವ್ಯಕ್ತಿಯೊಬ್ಬ, ಅದರ ಆವರಣದಲ್ಲಿ ಹಾಗೂ ವೆಲಚೇರಿ ಮತ್ತು ತಾರಾಮಣಿಗಳ ಕೆಲವು ಶಾಲೆಗಳ ಸಹಿತ ಇತರ ಶಾಲೆಗಳಲ್ಲಿ ಬಾಂಬ್‌ಗಳು ಸ್ಫೋಟಿಸಲಿವೆಯೆಂದು ಹೇಳಿದ್ದನು.
ದಿಗಿಲುಗೊಂಡ ಹೆತ್ತವರು ತಮ್ಮ ಮಕ್ಕಳನ್ನು ಕರೆ ತರಲು ಶಾಲೆಗಳಿಗೆ ಧಾವಿಸಿದರು.
ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯದಳಗಳು ಶಾಲೆಗಳ ಆವರಣಗಳನ್ನು ಶೋಧಿಸಿದವು. ಬಳಿಕ ಅವು ಇದೊಂದು ಹುಸಿ ಕರೆಯೆಂದು ಘೋಷಿಸಿದವು.