ಸುಳ್ಯ: ರಾಜ್ಯಮಟ್ಟದ ರೋವರ್ಸ್ ಜಲಸಾಹಸ ಶಿಬಿರಕ್ಕೆ ಚಾಲನೆ
ಸುಳ್ಯ, ಜ.5: ನಾಲ್ಕು ದಿನಗಳ ರಾಜ್ಯ ಮಟ್ಟದ ರೋವರ್ಸ್ ಜಲ ಸಾಹಸ ಶಿಬಿರ ಸುಳ್ಯದಲ್ಲಿ ಆರಂಭಗೊಂಡಿದೆ.ಾಲೇಜು ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ನೆಹರೂ ಮೆಮೋರಿಯಲ್ ಕಾಲೇಜು ಇದರ ಆಶ್ರಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ರೋವರ್ಸ್ ಜಲಸಾಹಸ ಶಿಬಿರವನ್ನು ಅಕಾಡಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಿದರು. ಕೆ.ವಿ.ಜಿ. ಆಯುರ್ವೇದಿಕ್ ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ವಿ.ಜಿ. ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಎನ್.ಎಸ್.ಶೆಟ್ಟರ್, ನಿವೃತ್ತ ಶಿಕ್ಷಕಿ ಕಮಲಾಕ್ಷಿ ಟೀಚರ್, ಎನ್‌ಎಂಸಿ ಪ್ರಾಂಶುಪಾಲ ಮೇಜರ್ ಗಿರಿಧರ್ ಗೌಡ ಮಾತನಾಡಿದರು.
ವೇದಿಕೆಯಲ್ಲಿ ಪ್ರಭಾಕರ ಭಟ್, ಅಬೂಬಕರ್ ಕಟ್ಟೆಕ್ಕಾರ್ಸ್, ಶಿಬಿರದ ನಾಯಕ ಪ್ರತಿಮ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಸ್ಕೌಟ್ಸ್ ಡಿಒಸಿ ಎಂ.ಜಿ.ಕಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಸ್.ಎಂ.ಬಾಪೂ ಸಾಹೇಬ್ ಸ್ವಾಗತಿಸಿದರು. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರಾರ್ಥಿಗಳ ಜಲಸಾಹಸಸುಳ್ಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ರೋವರ್ಸ್ ಜಲಸಾಹಸ ಶಿಬಿರದ 2ನೆ ದಿನ ಅಡ್ಕಾರ್ ಶ್ರೀಸುಬ್ರಹ್ಮಣ್ಯ ದೇವಳದ ಸಮೀಪ ಪಯಸ್ವಿನಿ ನದಿಯಲ್ಲಿ ಶಿಬಿರಾರ್ಥಿಗಳ ಜಲಸಾಹಸ ನಡೆಯಿತು. 70ಕ್ಕೂ ಅಧಿಕ ಶಿಬಿರಾರ್ಥಿಗಳು ಪಯಸ್ವಿನಿ ಹೊಳೆಗೆ ಬಂದು ಲೈಫ್‌ಜಾಕೆಟ್ ಧರಿಸಿ ನೀರಿಗಿಳಿದು ವಿವಿಧ ಸಾಹಸಗಳನ್ನು ಪ್ರದರ್ಶಿಸಿದರು. ತೆಪ್ಪರಚಿಸಿ ಹುಟ್ಟು ಹಾಕುತ್ತಾ ನೀರಲ್ಲಿ ಸಾಗಿದರು. ಮುಳುಗು ತಜ್ಞ ಪ್ರಭಾಕರ ಪೈ, ದಾಮೋದರ ನೇರಳ ಮೊದಲಾದವರು ಜಲಸಾಹಸಕ್ಕೆ ಸಹಕರಿಸಿದರು. ಜಲಸಾಹಸದಲ್ಲಿ ರಾಜ್ಯದ ಸುಮಾರು 7 ಜಿಲ್ಲೆಗಳ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಸಾಹಸ ಪ್ರದರ್ಶಿಸಿದರು. ದಕ್ಕೂ ಮೊದಲು ಪೂರ್ವಬಾವಿಯಾಗಿ ಪರಿಶೀಲನೆ ನಡೆಸಿದ ಅಗ್ನಿಶಾಮಕ ಠಾಣಾಧಿಕಾರಿ ರಾಜಗೋಪಾಲ್ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸ್ಕೌಟ್ಸ್ ರಾಜ್ಯ ಸಂಘಟನಾ ಆಯುಕ್ತ ಮಂಜುನಾಥ ಆಚಾರ್, ಸ್ಕೌಟ್ಸ್ ಡಿಒಸಿ ಎಂ.ಜಿ.ಕಜೆ, ಎ.ಎಸ್.ಒ.ಸಿ. ಪ್ರಭಾಕರ ಭಟ್, ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಜಾರ್ಜ್ ಡಿಸೋಜ ಮೊದಲಾದವರು ಸ್ಥಳದಲ್ಲಿದ್ದರು. ಶಿಬಿರದ ನಾಯಕರಾದ ಜಿಲ್ಲಾ ತರಬೇತಿ ಆಯುಕ್ತ ಪ್ರತಿಮ್‌ಕುಮಾರ್ ಕೆ.ಎಸ್. ಜಲಸಾಹಸ ಆಟಗಳ ಮಾರ್ಗದರ್ಶನ ನೀಡಿದರು.