ಧರ್ಮಸ್ಥಳ ಪೊಲೀಸ್ ಠಾಣೆ 10 ದಿನಗಳೊಳಗೆ ಉದ್ಘಾಟನೆ: ಎಸ್ಪಿ
ಮಂಗಳೂರು, ಜ.5: ಧರ್ಮಸ್ಥಳದಲ್ಲಿ ನೂತನ ಪೊಲೀಸ್ ಠಾಣೆಗೆ ಎಸ್ಸೈ ಹಾಗೂ 12 ಸಿಬ್ಬಂದಿಯ ನೇಮಕವಾಗಿದ್ದು, 10 ದಿನಗಳೊಳಗೆ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ. ಧರ್ಮಸ್ಥಳ ಠಾಣೆ ಮಂಜೂರು ಗೊಂಡು, ಸಿಬ್ಬಂದಿಯ ನೇಮಕಾತಿ ಆಗಿ ಆರು ತಿಂಗಳು ಕಳೆ ದರೂ ಠಾಣೆ ಉದ್ಘಾಟನೆ ಗೊಳ್ಳದೆ, ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ದಲಿತ ಕುಂದು ಕೊರತೆಗಳ ಮಾಸಿಕ ಸಭೆಯಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಸುದ್ದಿ ಗಾರರಿಗೆ ಈ ವಿಷಯ ತಿಳಿಸಿದರು. ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್ಪಿ ಡಾ.ಶರಣಪ್ಪ, ಚುನಾ ವಣೆ ಹಾಗೂ ಜಿಲ್ಲೆಯಲ್ಲಿ ಸಂಭ ವಿಸಿದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಠಾಣೆಯ ಉದ್ಘಾಟನಾ ಕಾರ್ಯ ವಿಳಂಬ ವಾಗಿದೆ. ಶೀಘ್ರದಲ್ಲೇ ಧರ್ಮಸ್ಥಳ ಠಾಣೆ ಉದ್ಘಾಟನೆಗೆ ದಿನ ನಿಗದಿಗೊಳ್ಳಲಿದೆ ಎಂದರು.
ಆಪರೇಶನ್ ಮುಸ್ಕಾನ್- 2 ಆರಂಭ
ಕಾಣೆಯಾದ ಮಕ್ಕಳ ಪತ್ತೆ ಮಾಡುವ ನಿಟ್ಟಿನಲ್ಲಿ ‘ಆಪರೇಶನ್ ಮುಸ್ಕಾನ್ -2’ ಜನವರಿ 1ರಿಂದ ಆರಂಭಗೊಂಡಿದ್ದು, ಜ.31ರವರೆಗೆ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ನಡೆ ಯಲಿದೆ. ಈ ಅವಧಿಯಲ್ಲಿ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಠಾಣೆ ಗಳಲ್ಲಿ ನಾಪತ್ತೆಯಾದ ಮಕ್ಕಳ ಪತ್ತೆ ಕಾರ್ಯ ನಡೆಯಲಿದೆ ಎಂದು ಎಸ್ಪಿ ಡಾ. ಶರಣಪ್ಪ ತಿಳಿಸಿದರು. ಅತ್ಯುತ್ತಮ ಘಟಕ ಶ್ಲಾಘನೆ
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಜಿಲ್ಲಾ ಮಾನವ ಸಾಗಾಟ ವಿರೋಧಿ ಘಟಕ ರಾಜ್ಯ ದಲ್ಲಿ ಅತ್ಯುತ್ತಮ ಘಟಕ ವೆಂಬ ಶ್ಲಾಘನೆಗೆ ಪಾತ್ರವಾಗಿದೆ ಎಂದು ಎಸ್ಪಿ ತಿಳಿಸಿದರು.