ಮಹಿಳೆಗೆ ವಂಚನೆ: ಜ್ಯೋತಿಷಿಯ ಬಂಧನ
Update: 2016-01-06 00:09 IST
ಸುಳ್ಯ, ಜ.5: ಜ್ಯೋತಿಷ್ಯದ ಮೂಲಕ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ವಂಚಿಸಿದ ವ್ಯಕ್ತಿಯೊಬ್ಬ ನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಮಕ್ಕಳಾಗದವರಿಗೆ ಮಕ್ಕಳಾಗುವಂತೆ ಔಷಧಿ ನೀಡುವುದಾಗಿ ಹೇಳಿ ಮಹಿಳೆಯೊಬ್ಬರಿಂದ ಹಣ ಪಡೆದು ವಂಚಿಸಿದ ಹಾಸನ ಜಿಲ್ಲೆ ಜಾವಗಲ್‌ನ ಜ್ಯೋತಿಷಿ ಚಂದ್ರಯ್ಯ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಈತ ಮರ್ಕಂಜ ಹಾಗೂ ಮಡಪ್ಪಾಡಿ ಗ್ರಾಮಗಳಲ್ಲಿ ಮನೆಗಳಿಗೆ ಹೋಗಿ ಹಲವರಿಗೆ ವಂಚನೆ ಮಾಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಮರ್ಕಂಜದಲ್ಲಿದ್ದ ಚಂದ್ರಯ್ಯನನ್ನು ಪೊಲಿಸರು ಸೋಮವಾರ ಬಂಧಿಸಿದ್ದಾರೆ.