ಮೂಡುಬಿದಿರೆ: ಇಂದಿನಿಂದ ಹಲವೆಡೆ ಏಕಮುಖ ಸಂಚಾರ
Update: 2016-01-06 00:10 IST
ಮೂಡುಬಿದಿರೆ, ಜ.5: ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಸಾಮಾನ್ಯ ಸಭೆಯ ನಿರ್ಣ ಯಾನುಸಾರ ಕೆಳಕಂಡ ರಸ್ತೆಗಳಲ್ಲಿ ಏಕಮುಖ ಸಂಚಾರವು ಜ.6ರಂದು ಪ್ರಾರಂಭಗೊಳ್ಳಲಿದೆ.
ಕೃಷ್ಣಕಟ್ಟೆಯಿಂದ ಪಟ್ಟಾಡಿ ತನಕ ಏಕಮುಖ ಸಂಚಾರ ಮತ್ತು ದ್ವಿಚಕ್ರ ವಾಹನಗಳ ನಿಲುಗಡೆಗೆ ಮಾತ್ರ ಅನುಮತಿ ನೀಡಲಾಗಿದೆ. ಹನುಮಾನ್ ದೇವಸ್ಥಾನದಿಂದ ಅಮರಶ್ರೀಗೆ ಹೋಗುವ ರಸ್ತೆಯಲ್ಲಿ ಏಕಮುಖ ಸಂಚಾರ ಹಾಗೂ ಆ ರಸ್ತೆಯಲ್ಲಿ ಎಡಬದಿಯಲ್ಲಿ ಮಾತ್ರ ವಾಹನ ಪಾರ್ಕಿಂಗ್ ಮಾಡಬಹುದು.
ವಿಜಯ ಬ್ಯಾಂಕ್‌ನಿಂದ ಸ್ವರಾಜ್ಯ ಮೈದಾನದವರೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು. ಕಾನೂನು ಉಲ್ಲಂಘನೆ ಮಾಡಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಡುಬಿದಿರೆ ಪುರಸಭೆಯ ಪ್ರಕಟನೆ ತಿಳಿಸಿದೆ.