ಜ.8ರಂದು ಮುಖ್ಯಮಂತ್ರಿ ಸಾಂತ್ವನ ಯೋಜನೆ ಉದ್ಘಾಟನೆ
ಮಂಗಳೂರು, ಜ.5: ಏಶ್ಯದಲ್ಲೇ ಪ್ರಥಮ ಯೋಜನೆಯಾಗಿರುವ, ಕೇಂದ್ರ ಸರಕಾರ ದಿಂದಲೂ ದೇಶಾದ್ಯಂತ ಅನುಷ್ಠಾನಕ್ಕೆ ಚಿಂತನೆ ನಡೆದಿರುವ ಕರ್ನಾಟಕದ ‘ಮುಖ್ಯ ಮಂತ್ರಿ ಸಾಂತ್ವನ ಯೋಜನೆ’ ಜ.8ರಂದು ಬೆಂಗಳೂರಿನಲ್ಲಿ ಉದ್ಘಾಟನೆಗೊ ಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಮಾತನಾಡಿದ ಅವರು, ಅಪಘಾತಕ್ಕೀಡಾದ ವ್ಯಕ್ತಿಗೆ 48 ಗಂಟೆಯ ಅವಧಿಗೆ ಗರಿಷ್ಠ 25,000 ರೂ.ವರೆಗಿನ ಚಿಕಿತ್ಸೆಯನ್ನು ಮಾನ ವೀಯ ನೆಲೆಯಲ್ಲಿ ಒದಗಿಸುವ ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ 72 ಕೋಟಿ ರೂ.ನ ಬೇಡಿಕೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾ ಗಿದ್ದು, 10 ಕೋ.ರೂ. ಬಿಡು ಗಡೆಯಾಗಿದೆ ಎಂದರು. ಈ ಯೋಜನೆಯು ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳು ಹಾಗೂ ಸರಕಾರದ ಜತೆ ನೋಂದಾಯಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಳಲ್ಲೂ ಲಭ್ಯವಾಗಲಿವೆ. ಈ ಯೋಜನೆಯನ್ನು ಪರಿಣಾಮ ಕಾರಿ ಯಾಗಿಸುವ ನಿಟ್ಟಿನಲ್ಲಿ ಗೃಹ ಹಾಗೂ ಸಾರಿಗೆ ಸಚಿವಾಲಯಗಳ ಜತೆ ಜಂಟಿ ಸಭೆ ನಡೆಸಲಾಗುವುದು ಎಂದವರು ಹೇಳಿದರು. ಈ ಯೋಜನೆ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಕೇಂದ್ರ ಸರಕಾರ ಕೂಡಾ ಈ ಯೋಜನೆಯನ್ನು ದೇಶಾದ್ಯಂತ ಅನುಷ್ಠಾನಗೊಳಿಸುವ ಚಿಂತನೆ ನಡೆಸಿದೆ ಎಂದು ತಿಳಿಸಿದರು. ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ವಿಳಂಬಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಕಾಮಗಾರಿಯನ್ನು ನಡೆಸುತ್ತಿದ್ದ ಹಿಂದಿನ ಗುತ್ತಿಗೆದಾರರನ್ನು ಕೈಬಿಟ್ಟು ಅವರನ್ನು ಕಪ್ಪುಪಟ್ಟಿಗೆ ಸೇರಿಸ ಲಾಗಿದೆ. ಹೊಸ ಗುತ್ತಿಗೆದಾರರ ಮೂಲಕ ಕಾಮಗಾರಿ ಆರಂಭಿಸಿ ಎಪ್ರಿಲ್‌ನೊಳಗೆ ಎರಡು ಅಂತಸ್ತುಗಳ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತ ಗೊಳಿ ಸಲಾಗುವುದು ಎಂದವರು ಮಾಹಿತಿ ನೀಡಿದರು.
ಜ.7ರಿಂದ 9: ಇಂಡಿಯಾ ಮೆಡಿಕಲ್ ಎಕ್ಸ್‌ಪೋ
ಔಷಧಿ ಉದ್ದಿಮೆ, ವೈದ್ಯಕೀಯ ಎಲೆ ಕ್ಟ್ರಾನಿಕ್ಸ್ ಮತ್ತು ಉಪಕರಣ ಕ್ಷೇತ್ರದ ಬಗ್ಗೆ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮ್ಮೇಳನ ‘ಇಂಡಿಯಾ
ಾರ್ಮಾ’ ಮತ್ತು ‘ಇಂಡಿಯಾ ಮೆಡಿಕಲ್ ಎಕ್ಸ್‌ಪೋ’ ಬೆಂಗಳೂರಿನಲ್ಲಿ ಜ.7ರಿಂದ 9ರವರೆಗೆ ನಡೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು. ದೇಶ ವಿದೇಶಗಳ ಔಷಧೀಯ ಕಂಪೆನಿ ಗಳು, ವೈದ್ಯಕೀಯ ಸಾಧನ ಸಲಕರಣೆಗಳ ಸಂಸ್ಥೆಗಳು ಈ ಪ್ರದರ್ಶನ ಹಾಗೂ ಸಮ್ಮೇ ಳನದಲ್ಲಿ ಭಾಗವಹಿ ಸಲಿವೆ ಎಂದು ಅವರು ಹೇಳಿದರು.