ಕುಂದಾಪುರ: ಅಕ್ರಮ ಮದ್ಯ ವಶ
Update: 2016-01-06 00:11 IST
ಕುಂದಾಪುರ, ಜ.5: ಸೋಮವಾರ ರಾತ್ರಿ 8 ಗಂಟೆಗೆ ತಾಲೂಕಿನ ಹೆಮ್ಮಕ್ಕಿಯಿಂದ ಬೆಳ್ಳಾಲಕ್ಕೆ ಹೋಗುವ ರಸ್ತೆಯಲ್ಲಿ ಗಸ್ತು ನಡೆಸುತ್ತಿದ್ದ ಅಬಕಾರಿ ಅಧಿಕಾರಿಗಳು, ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಸಾಗಿಸುತಿದ್ದ 10.170 ಲೀ. ಅಕ್ರಮ ಮದ್ಯವನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ಳಾಲ ಗ್ರಾಮದ ಶ್ರೀಪತಿ ಆಚಾರ್ಯ ಎಂದು ಗುರುತಿಸಲಾಗಿದೆ. ವಶಪಡಿಸಿಕೊಳ್ಳಲಾದ ಮದ್ಯ ಹಾಗೂ ವಾಹನದ ಅಂದಾಜು ವೌಲ್ಯ 35,000 ರೂ.ಗಳೆಂದು ಅಂದಾಜಿಸಲಾಗಿದೆ.