×
Ad

ಆಸ್ಟ್ರೇಲಿಯ ಸರಣಿಯಲ್ಲಿ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ: ಧೋನಿ

Update: 2016-01-06 00:12 IST


ಮುಂಬೈ, ಜ.5: ಮುಂಬರುವ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
 ಆಸ್ಟ್ರೇಲಿಯಕ್ಕೆ ಪ್ರವಾಸ ಸರಣಿಗೆ ಹೊರಡುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧೋನಿ ಇತ್ತೀಚೆಗೆ ನಡೆದಿರುವ ದೇಶೀಯ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಯುವ ಆಟಗಾರರಿಗೆ ಆಸ್ಟ್ರೇಲಿಯದಲ್ಲಿ ವಿಭಿನ್ನ ವಾತಾವರಣದಲ್ಲಿ ಆಡುವ ಅವಕಾಶ ದೊರೆಯಲಿದೆ.
 ಭಾರತ ತಂಡ ಜನವರಿ 12ರಂದು ಪರ್ತ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸುವ ಮೂಲಕ ಪ್ರವಾಸ ಸರಣಿಯನ್ನು ಭಾರತ ಆರಂಭಿಸಲಿದೆ. ಐದು ಏಕದಿನ ಪಂದ್ಯಗಳ ಬಳಿಕ ಮೂರು ಟ್ವೆಂಟಿ-20 ಪಂದ್ಯಗಳನ್ನು ಭಾರತ ಆಡಲಿದೆ.
 ಏಕದಿನ ತಂಡದಲ್ಲಿ ಯುವ ಕ್ರಿಕೆಟಿಗರಾದ ಗುರುಕೀರತ್ ಸಿಂಗ್, ರಿಶಿ ಧವನ್, ವೀರೇಂದರ್ ಸರಣ್ ಮತ್ತು ಮನೀಷ್ ಪಾಂಡೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಟ್ವೆಂಟಿ-20 ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೆ.
ಮುಂದಿನ ಮಾರ್ಚ್‌ನಲ್ಲಿ ಭಾರತದಲ್ಲಿ ಟ್ವೆಂಟಿ-20 ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಆಸ್ಟ್ರೇಲಿಯದಲ್ಲಿ ಮೂರು ಟ್ವೆಂಟಿ -20 ಪಂದ್ಯಗಳು ತಯಾರಿ ನಡೆಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಸಾಮಾನ್ಯವಾಗಿ ಪ್ರವಾಸ ಸರಣಿಯಲ್ಲಿ ಒಂದು ಅಥವಾ 2 ಟ್ವೆಂಟಿ-20 ಪಂದ್ಯಗಳು ಇರುತ್ತವೆ. ಆದರೆ ಈ ಸರಣಿಯಲ್ಲಿ ಮೂರು ಪಂದ್ಯಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ನುಡಿದರು.
25ರ ಹರೆಯದ ಸ್ಟಾರ್ ಬೌಲರ್ ಮುಹಮ್ಮದ್ ಶಮಿ ತಂಡಕ್ಕೆ ವಾಪಸಾಗಿರುವ ಬಗ್ಗೆ ಧೋನಿ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ ಬಂಗಾಳದ ವೇಗಿ ಶಮಿ ಅವರು ಆಸ್ಟ್ರೇಲಿಯದಲ್ಲಿ ಯಾವ ರೀತಿ ಬೌಲಿಂಗ್ ನಡೆಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ. ಅವರು ಚೆನ್ನಾಗಿ ಪ್ರದರ್ಶನ ನೀಡುವ ವಿಶ್ವಾಸವನ್ನು ಧೋನಿ ವ್ಯಕ್ತಪಡಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News