×
Ad

ಟೆಸ್ಟ್‌ನಲ್ಲಿ ಅಮ್ಲ ನಾಲ್ಕನೆ ದ್ವಿಶತಕ

Update: 2016-01-06 00:14 IST


ಕೇಪ್‌ಟೌನ್, ಜ.5: ದಕ್ಷಿಣ ಆಫ್ರಿಕದ ನಾಯಕ ಹಾಶಿಮ್ ಅಮ್ಲ ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ದ್ವಿಶತಕ ದಾಖಲಿಸಿದ್ದಾರೆ.
ಅಮ್ಲ ಅವರದ್ದು ಇದು ನಾಲ್ಕನೆ ದ್ವಿಶತಕ ಆಗಿದೆ. ಅಮ್ಲ 707 ನಿಮಿಷಗಳ ಬ್ಯಾಟಿಂಗ್‌ನಲ್ಲಿ 477 ಎಸೆತಗಳನ್ನು ಎದುರಿಸಿ 27 ಬೌಂಡರಿಗಳ ಸಹಾಯದಿಂದ 201 ರನ್ ಗಳಿಸಿ ಔಟಾದರು.
   ಅಮ್ಲ ಶತಕದ ನೆರವಿನಲ್ಲಿ ದಕ್ಷಿಣ ಆಫ್ರಿಕ ತಂಡ 211 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 627 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಅಮ್ಲ ಸುಮಾರು 12 ಗಂಟೆಗಳ ಕಾಲ ಕ್ರೀಸ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಆಫ್ರಿಕ ತಂಡದ ತಾಂಬಾ ಬವುಮಾ ಶತಕ ದಾಖಲಿಸಿದ್ದಾರೆ.
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟದಲ್ಲಿ 629 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಮಂಗಳವಾರ ದಕ್ಷಿಣ ಆಫ್ರಿಕ 627 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News