ಟೆಂಪೊ ಢಿಕ್ಕಿ: ಬೈಕ್ ಸವಾರ ಮೃತ್ಯು
ಕಾಪು, ಜ.5: ಮಣಿಪುರ ಗ್ರಾಮದ ದೆಂದೂರುಕಟ್ಟೆ ಸಮೃದ್ಧಿ ನಗರ ಎಂಬಲ್ಲಿ ಜ.4ರಂದು ಟೆಂಪೊವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮೂಡುಬೆಳ್ಳೆಯ ನವೀನ್ ಎಂದು ಗುರುತಿಸಲಾಗಿದೆ. ಬೈಕ್‌ನ ಹಿಂಬದಿಯ ಸೀಟಿನಲ್ಲಿದ್ದ ಮೃತರ ಅಕ್ಕ ಜ್ಯೋತಿ ಎಂಬವರು ಗಂಭೀರ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೂರ್ವಾಹ್ನ 11:45ರ ಸುಮಾರಿಗೆ ದೆಂದೂರುಕಟ್ಟೆಯಿಂದ ಮೂಡುಬೆಳ್ಳೆಗೆ ಹೋಗುತ್ತಿದ್ದ ಬೈಕ್‌ಗೆ ಮೂಡುಬೆಳ್ಳೆ ಕಡೆಯಿಂದ ದೆಂದೂರುಕಟ್ಟೆ ಕಡೆಗೆ ಬರು ತ್ತಿದ್ದ ಟೆಂಪೊ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದ ಇಬ್ಬರು ಸವಾರರು ಗಾಯಗೊಂಡರು. ಗಂಭೀರವಾಗಿ ಗಾಯಗೊಂಡ ನವೀನ್ ಅಪರಾಹ್ನ 3:15ಕ್ಕೆ ಚಿಕಿತ್ಸೆ ಫಲಕಾರಿ ಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿ ಮೃತ್ಯು
ಬ್ರಹ್ಮಾವರ, ಜ.5: ಕೆಂಜೂರು ಸಮೀಪ ಜ.4ರಂದು ಪ್ರಜ್ಞಾಹೀನರಾಗಿ ಬಿದ್ದಿದ್ದ ಶೇಖರ ನಾಯ್ಕ (47) ಎಂಬವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.